ಬೆಳಗಾವಿ :ರಾಜಕೀಯ ರಂಗದಲ್ಲಿ ಹಿಂದುಳಿದ ವರ್ಗಗಳಿಗೆ ಸೂಕ್ತ ಸ್ಥಾನಮಾನ ಕೊಡುವದರೊಂದಿಗೆ ಸಬಕಾ ಸಾಥ ಸಬಕಾ ವಿಕಾಸ್ ತತ್ವವನ್ನು ಅಕ್ಷರಶಃ ಅನುಷ್ಠಾನಕ್ಕೆ ತಂದ ಕೀರ್ತಿ ಭಾರತೀಯ ಜನತಾ ಪಾರ್ಟಿಗೆ ಸಲ್ಲುತ್ತದೆ ಎಂದು ಬೆಳಗಾವಿ ಗ್ರಾ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು.
ನಗರದ ಗೋಮಟೇಶ್ವರ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಓಬಿಸಿ ಮೊರ್ಚಾ ಜಿಲ್ಲಾ ಘಟಕದ ಕಾರ್ಯಕಾರಣಿ ಸಭೆ ಉದ್ಘಾಟನೆಗೊಳಿಸಿ ಮಾತನಾಡಿ, ದೇಶದಲ್ಲಿ ೭೦ವರ್ಷ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಪರಿಶಿಷ್ಟ ಪಂಗಡಗಳ ಹೆಸರಿನ ಮೇಲೆರಾಜಕಾರಣ ಮಾಡಿ ಗರೀಭಿ ಹಟಾವೋ ಅಂತ ಹೇಳಿದವರು ಮಾತ್ರ ಶ್ರೀಮಂತರಾದರೆ ಹೊರತು ಬಡುವರಿಗಾಗಿ ತಂದ ಯೋಜನೆ ಯೋಜನೆಯಾಗಿಯೆ ಉಳಿದಿದೆ.
ಇದನ್ನ ಹೋಗಲಾಡಿಸಲು ಪ್ರಧಾನಿಗಳು ಹಗಲಿರಳು ಪರಿಶ್ರಮಪಡುತಿದ್ದಾರೆ ಎಂದರು. ಬಿಜೆಪಿ ಒಬಿಸಿ ಮೊರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬ,ರಾಜ್ಯ ಕಾರ್ಯದರ್ಶಿ ಕಿರಣ ಜಾಧವ ಮಾತನಾಡಿದರು.
ವೇದಿಕೆಯ ಮೇಲೆ ಬಸವರಾಜ ಮಾಳೆದೆನ್ನವರ,ಸತೀಶ ಶೇಡವಾಜ್ಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ಮೊಹಿತೆ, ಸುಭಾಷ್ ಪಾಟೀಲ, ಸಂದೀಪ ದೇಶಪಾಂಡೆ ಇದ್ದರು ಈರಣ್ಣ ಬಡಿಗೇರ, ಸ್ವಾಗತಿಸಿದರು. ಸಂತೋಷ ಹಡಪದ ನಿರೂಪಿಸಿದರು, ಉಮೇಶ ಪೂರಿ ವಂದಿಸಿದರು