ಬೆಳಗಾವಿ :ರಾಜ್ಯಸಭೆಯಲ್ಲಿ 19 ವರ್ಷಗಳ ಕಾಲ ಸದಸ್ಯನಾಗಿದನೆ. ಆದರೆ, ಮತ್ತೊಂದು ಸದನದ ಅಧ್ಯಕ್ಷರ ಬಗ್ಗೆ ಟಿಪ್ಪಣಿ ಮಾಡುವುದು ಯಾವ ಐತಿಹಾಸದಲಿಲ್ಲ, ನಾವು ನೋಡಿಲ್ಲ ಎಂದು ಕಾಗೇರಿ ವಿರುದ್ಧ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಟೀಕಾಪ್ರವಾಹ ನಡೆಸಿದ್ದಾರೆ.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ವಿಧಾನಸಭಾ ಅಧ್ಯಕ್ಷ ಸ್ಥಾನದಲ್ಲಿದ್ದಕೊಂಡು ಟೀಕೆ ಸರಿಯಲ್ಲ, ಆ ಹುದ್ದೆಯ ಘನತೆ, ಗೌರವ ತಕ್ಕಹಾಗೇ ನಡೆದುಕೊಳ್ಳಬೇಕು. ಆಡಳಿತ , ವಿಪಕ್ಷಗಳನ್ನು ತೂಗಿಸಿಕೊಂಡು ಹೋಗುವುದು ಅಧ್ಯಕ್ಷ ಜವಾಬ್ಧಾರಿ ಎಂದು ಆಕ್ರೋಶ ಹೊರಹಾಕಿದ್ದರು. ರಾಜ್ಯಸಭಾ ಇತಿಹಾಸವನ್ನು ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅರಿತುಕೊಳ್ಳಲಿ.
ಬಿಜೆಪಿಯವರು ವಿಪಕ್ಷದಲ್ಲಿದ್ದಾಗ ಸದನದ ಬಾವಿಯಲ್ಲಿ ಪೇಪರ್‌ಗಳು ಹಾರಾಡ್ತಿದ್ದು ನೆನಪಿಲ್ಲವೇ ಎಂದು ಎಚ್ಚರಿಸಿದರು. ದೇಶ, ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಏರಿಕೆ, ರೈತರ ಕುರಿತು ಕರಾಳ ಕಾನೂನು, ಪೆಗಾಸಿಸ್ ಫೋನ್ ಕದ್ದಾಲಿಕೆ ಪ್ರಕರಣ ಈ ಎಲ್ಲಾ ಬಗ್ಗೆ ಚರ್ಚೆಗೆ ಅವಕಾಶ ಕೊಡಲಿಲ್ಲ, ಗದ್ದಲ ಮದ್ಯೆ ಅವರಿಗೆ ಬೇಕಾದ ಯೋಜನೆಯನ್ನು ಅಂಗೀಕರಿಸಿದ ಸಾಕ್ಷಧಾರಗಳನ್ನು ನಮ್ಮಲಿವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
100 ಜನ ರಾಜಕೀಯ ನಾಯಕರು, 500 ಪತ್ರಕರ್ತರ ಫೋನ್ ಕದ್ದಾಲಿಕೆ ಆರೋಪವಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಗಳ ಫೋನ್ ಕದ್ದಾಲಿಕೆ ಆರೋಪವಿದೆ. ಇದು ರಾಷ್ಟ್ರೀಯ ಭದ್ರತೆಯ ವಿಚಾರ. ಈ ಬಗ್ಗೆ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದಾಗ ಘಟನೆ ನಡೆದಿದೆ ಎಂದು ಸ್ಪಷ್ಟನೆ ನೀಡಿದರು. ಕಾಗೇರಿ ಟಿಪ್ಪಣಿ ಮಾಡುವಾಗ ಗಂಭೀರವಾಗಿ ಚಿಂತನೆ ಮಾಡಬೇಕು. ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ದ ಹರಿಹಾಯ್ದರು.
ಹಾಲಿ ವಿಧಾನಪರಿಷತ್ ಸದಸ್ಯ ಡಿ.ಕೆ.ಹರಿಪ್ರಸಾದ್, ರಾಜ್ಯಸಭಾ ಸದಸ್ಯರು ನಾಶೀರ ಹುಷೇನ್ ಸಾಬ್ , ಮಾಜಿ ಸಚಿವ ಎಂ.ಬಿ.ಪಾಟೀಲ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಶಾಸಕ ಪೀರೋಜ್ ಸೇಠ್, ವೀರಕುಮಾರ್ ಪಾಟೀಲ, ಎಸ್.ಬಿ.ಗಾಟಗೆ, ವಿನಯ ನಾವಲಗಟ್ಟಿ ರಾಜು ಸೇಠ್, ರಾಜೇಂದ್ರ ಪಾಟೀಲ ಇತರರು ಇದ್ದರು.