ಏಷ್ಯಾದ ಅತಿ ದೊಡ್ಡ ಸೋಲಾರ್​​ ವಿದ್ಯುತ್​ ಉತ್ಪಾದನಾ ಉದ್ಘಾಟನೆ

  • 15 Jan 2024 , 2:02 AM
  • madyapradesh
  • 102

ರೇವಾ: ಮಧ್ಯಪ್ರದೇಶ ರೇವಾ ಜಿಲ್ಲೆಯಲ್ಲಿ ಏಷ್ಯಾದಅತಿದೊಡ್ಡ750ಮೆಗಾವ್ಯಾಟ್ಸಾಮರ್ಥ್ಯದಮೆಗಾಸೌರವಿದ್ಯುತ್ ಯೋಜನೆಯನ್ನು ಪ್ರಧಾನಿನರೇಂದ್ರಮೋದಿ ಶುಕ್ರವಾರ ಉದ್ಘಾಟಿಸಿದ್ದಾರೆ. ಏಷ್ಯಾದ ಅತಿ ದೊಡ್ಡ ಸೋಲಾರ್​​ ವಿದ್ಯುತ್​ ಉತ್ಪಾದನಾ ಘಟಕ ಇದಾಗಿದ್ದು, ಸದ್ಯ ಅಮೆರಿಕದಕ್ಯಾಲಿಫೋರ್ನಿಯಾದ ಅತಿ ದೊಡ್ಡ ಸೋಲಾರ್​ ಪ್ಲಾಂಟ್​ನ ದಾಖಲೆ ಬ್ರೇಕ್​ ಮಾಡಲಿದೆ. ಈ ಘಟಕವು ಬರೋಬ್ಬರಿ 3,700ಎಕರೆಪ್ರದೇಶದಲ್ಲಿ ನಿರ್ಮಾಣಗೊಂಡಿದ್ದು, ಇದಕ್ಕಾಗಿ 4,500ಕೋಟಿ ರೂ ವೆಚ್ಚ ಮಾಡಲಾಗಿದೆ. ಸರ್ಕಾರಿ ಸ್ವಾಮ್ಯದ ಸೌರಶಕ್ತಿ ನಿಗಮ (ಎಸ್‌ಇಸಿಐ) ಮತ್ತು ಮಧ್ಯಪ್ರದೇಶ ಉರ್ಜಾ ವಿಕಾಸ್ ನಿಗಮ್ ಲಿಮಿಟೆಡ್ (ಎಂಪಿಯುವಿಎನ್‌ಎಲ್) ಜಂಟಿ ಉದ್ಯಮವಾದ ರೇವಾ ಅಲ್ಟ್ರಾ ಮೆಗಾ ಸೋಲಾರ್ ಲಿಮಿಟೆಡ್ (ಆರ್‌ಯುಎಂಎಸ್‌ಎಲ್) 500 ಹೆಕ್ಟೇರ್‌ನಲ್ಲಿರುವ 250 ಮೆಗಾವ್ಯಾಟ್‌ನ ಮೂರು ಸೌರ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಿದೆ. ಭಾರತದಸೌರಶಕ್ತಿ  ನಿಗಮ ಮತ್ತು ಎಂಪಿಉರ್ಜಾವಿಕಾಸ್ ನಿಗಮ ಜಂಟಿಯಾಗಿ ರೇವಾ ಅಲ್ಟ್ರಾ ಮೆಗಾ ಸೋಲಾರ್ ಹೆಸರಿನ ಈ ಯೋಜನೆಯ ನೇತೃತ್ವ ವಹಿಸಲಿದೆ

Read All News