ಮೊದಲ ಪ್ರೆಸ್ ಕಾನ್ಫರೆನ್ಸ್ ನಡೆಸಿದ ತಾಲಿಬಾನ್

  • 17 Dec 2023 , 8:45 PM
  • world
  • 121

ಕಾಬುಲ್ :ಅಪಘಾನಿಸ್ತಾನವನ್ನು ಸಂಪೂರ್ಣ ವಶಪಡಿಸಿಕೊಂಡ ತಾಲಿಬಾನ್ ಇಂದು ಕಾಬುಲನಲ್ಲಿ  ಮೊದಲ ಪ್ರೆಸ್ ಕಾನ್ಫರೆನ್ಸ್ ನಡೆಸಿದೆ, ತಾಲಿಬಾನದಿಂದ್  ಮುಜಾಹಿದ್ ಮಾಧ್ಯಮದವರೊಂದಿಗೆ ಮಾತನಾಡುವ ಮೂಲಕ ಈ ಕೆಳಗಿನಂತೆ ಮಾತನಾಡಿದ್ದಾನೆ.

ನಮ್ಮ ಸಾಂಸ್ಕೃತಿಕ ಚೌಕಟ್ಟಿನೊಳಗೆ ನಾವು ಮಾಧ್ಯಮಕ್ಕೆ ಬದ್ಧರಾಗಿದ್ದೇವೆ ಎಂದು ಮಾಧ್ಯಮಗಳಿಗೆ ನಾನು ಭರವಸೆ ನೀಡಲು ಬಯಸುತ್ತೇನೆ ಹಾಗು ಖಾಸಗಿ ಮಾಧ್ಯಮಗಳು ಮುಕ್ತ ಮತ್ತು ಸ್ವತಂತ್ರವಾಗಿ ಮುಂದುವರಿಯಬಹುದು ಎಂದು ಮುಜಾಹಿದ ಪ್ರೆಸಕಾನ್ಫೆರನ್ಸನಲ್ಲಿ ಹೇಳಿದ್ದಾನೆ.

ನಮ್ಮ ದೇಶದಲ್ಲಿ ಇಸ್ಲಾಂ ಬಹಳ ಮುಖ್ಯವಾಗಿದೆ ಆದ್ದರಿಂದ ನಿಮ್ಮ ಕಾರ್ಯಕ್ರಮಗಳನ್ನು ತೋರಿಸುವಾಗ ಇಸ್ಲಾಮಿಕ್ ಮೌಲ್ಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಸಿಚಿಸಿದರು. ಮಾಧ್ಯಮದ ನಿಷ್ಪಕ್ಷಪಾತ ಬಹಳ ಮುಖ್ಯ, ಅವರು ನಮ್ಮ ಕೆಲಸವನ್ನು ವಿಮರ್ಶಿಸಬಹುದು ಇದರಿಂದ ನಾವು ಸುಧಾರಿಸಬಹುದು ಆದರೆ ಮಾಧ್ಯಮಗಳು ನಮ್ಮ ವಿರುದ್ಧ ಕೆಲಸ ಮಾಡಬಾರದು ಎಂದು ಅವರು ಕಾನ್ಫರೆನ್ಸನಲ್ಲಿ ಹೇಳಿದ್ದಾರೆ.

ಶರಿಯಾ ಕಾನೂನಿನಡಿಯಲ್ಲಿ ಮಹಿಳೆಯರಿಗೆ ಅನ್ಯಾಯವಾಗುವದಿಲ್ಲ , ತಾಲಿಬಾನ್ ಯಾವುದೇ ಆಂತರಿಕ ಮತ್ತು ಬಾಹ್ಯ ಶತ್ರುಗಳನ್ನು ಬಯಸುವುದಿಲ್ಲ, 20 ವರ್ಷಗಳ ಹಿಂದಿನ ತಾಲಿಬಾನ್ ಮತ್ತು ನಮ್ಮ ನಡುವೆ ಅಜಗಜಾಂತರ ವ್ಯತ್ಯಾಸವಿದೆ ಎಂದು ತಿಳಿಸಿದ್ದಾರೆ.

Read All News