ವಿನಯ ಕುಲಕರ್ಣಿ ಬಿಡುಗಡೆಗೆ ಕ್ಷಣಗಣನೆ

  • 15 Jan 2024 , 1:38 AM
  • Belagavi
  • 117

ಬೆಳಗಾವಿ :ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಇಂದು ಬಿಡುಗಡೆ ಹಿನ್ನೆಲೆ. ಬೆಳಗಾವಿ ಹಿಂಡಲಗಾ ಜೈಲ್ ಮುಂದೆ ಜಮಾಯಿಸುತ್ತಿರುವ ವಿನಯ್ ಕುಲಕರ್ಣಿ ಅಭಿಮಾನಿಗಳು. ಜಾಮೀನು ಮಂಜೂರು ಹಿನ್ನಲೆ ಇಂದು ಜೈಲಿನಿಂದ ಬಿಡುಗಡೆ ಸಾಧ್ಯತೆ. ಅಗಸ್ಟ್ 19 ರಂದು ಜಾಮೀನು ಸಿಕ್ಕಿತ್ತು.

ಆದರೆ ಹಿಂಡಲಗಾ ಜೈಲು ಅಧಿಕಾರಿಗಳಿಗೆ ಜಾಮೀನು ಆದೇಶ ಪ್ರತಿಯ ಇಮೇಲ್. ಬಂದಿರಲಿಲ್ಲ ಹೀಗಾಗಿ ಜಾಮೀನಿನ ನಂತರದ ಬಿಡುಗಡೆ ಪ್ರಕ್ರಿಯೆ ಅರ್ಧಕ್ಕೆ ನಿಂತಿದ್ದವು. ಜಾಮೀನ ಬಳಿಕ ಸ್ಥಳಿಯ ಕೋರ್ಟ್ ನಲ್ಲಿ ಸ್ಯೂರಿಟಿ ನೀಡಬೇಕಾಗಿತ್ತು.ನಿನ್ನೆ ಕೋರ್ಟ್ ರಜೆ ಹಿನ್ನೆಲೆ ನಿನ್ನೆಯೂ ಕೂಡ ಬಿಡುಗಡೆ ಭಾಗ್ಯ ಸಿಕ್ಕಿರಲಿಲ್ಲ.ಇಂದು ಕೋರ್ಟ್ ನಿಂದ ಬಿಡುಗಡೆ ಆದೇಶ ಪ್ರತಿ ಸಿಕ್ಕರೆ ಬಿಡುಗಡೆ.ಆದೇಶ ಪ್ರತಿ ಬಂದ ಬಳಿಕ ವಿನಯ್ ಕುಲಕರ್ಣಿ ಬಿಡುಗಡೆ ಪ್ರಕ್ರಿಯೆ ಮಾಡಲಿರುವ ಜೈಲು ಸಿಬ್ಬಂದಿ.

ಇಂದು ಬೆಳಗ್ಗೆ 10 ಗಂಟೆಯ ನಂತರ ಬಿಡುಗಡೆ ಪ್ರಕ್ರಿಯೆ.ಹಿಂಡಲಗಾ ಜೈಲಿನಿಂದ 11ಗಂಟೆಗೆ ವಿನಯ್ ಬಿಡುಗಡೆ ಸಾಧ್ಯತೆ. ಧಾರವಾಡ ಜಿ.ಪಂ.ಸದಸ್ಯ ಯೋಗೀಶ್‌ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ವಿನಯ್ ಕುಲಕರ್ಣಿ.2020ರ ನವೆಂಬರ್ 5ರಂದು ಹಿಂಡಲಗಾ ಜೈಲು ಸೇರಿದ್ದ ವಿನಯ್ ಕುಲಕರ್ಣಿ.ಇಂದು ಬಿಡುಗಡೆಯಾದರೆ 9 ತಿಂಗಳ 16 ದಿನ ಜೈಲುವಾಸ ಅಂತ್ಯ.

Read All News