ಬೆಳಗಾವಿ ನಾಳೆ ರಕ್ಷಾ ಬಂಧನ ಇರುವುದರಿಂದ ವಿನಯ ಕುಲಕರ್ಣಿ ಅವರು ಬಿಡುಗಡೆಯಾಗುತ್ತಿರುವುದು ಸಂತಸ ತಂದಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. ಅವರು ಶನಿವಾರ ಬೆಳಗಾವಿ ಹಿಂಡಲಗಾ ಕಾರಾಗ್ರಹದ ಆವರಣದಲ್ಲಿ ಮಾಧ್ಯಮದವರೊಂದಿಗೆ ಹಿರಿಯ ಸಹೋದರರಾದ ವಿನಯ ಕುಲಕರ್ಣಿ ಅವರು ನಾಳೆ ರಕ್ಷಾ ಬಂಧನ ಇರುವುದರಿಂದ ಅಣ್ಣನಿಗೆ ದೈರ್ಯ ತುಂಬುವ ಸಲುವಾಗಿ ಬಂದಿದ್ದೇನೆ.
ಅವರು ದೈರ್ಯವಂತರು ನಾಳೆ ರಕ್ಷಾ ಬಂಧನ ಆದ್ದರಿಂದ ಅವರನ್ನು ಭೇಟಿಯಾಗಲು ಬಂದಿದ್ದೇನೆ ಎಂದರು. ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಚಿಹ್ನೆಯಿಂದ ನಡೆಸುವಂತೆ ವರಿಷ್ಠರು ತಿರ್ಮಾನಿಸಿದ್ದಾರೆ ಎಂದು ಹೇಳಿದರು.