ಬೆಳಗಾವಿ: 18 ತಿಂಗಳ ಬಳಿಕ ಸರಕಾರದ ಆದೇಶದ ಮೇರೆಗೆ ಬೆಳಗಾವಿ ಶಿಕ್ಷಣ ಇಲಾಖೆ ಆಡಳಿತ ಮಂಡಳಿ ವತಿಯಿಂದ ಬೆಳಗಾವಿಯಲ್ಲಿರುವ ವನಿತಾ ವಿದ್ಯಾಲಯ ಶಾಲಾ ಕಾಲೇಜು ಆರಂಭಿಸಲಾಗಿದೆ .
ಹೌದು ಕೋರೊನಾ ಮಹಾಮಾರಿ ಎರಡನೇ ಅಲೆಯಲ್ಲಿ ಶಾಲಾ ಕಾಲೇಜುಗಳನ್ನ ಮುಚ್ಚಲಾಗಿತ್ತು ಆದರೆ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಸರಕಾರ ಶಾಲೆ ಕಾಲೇಜುಗಳನ್ನ ತೆರೆಯಬೇಕು ಆದೇಶ ಹೊರಡಿಸಿದೆ. ಉತ್ಸಾಹದಿಂದ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು.
ಇವತ್ತು ಬೆಳಗಾವಿಯ ಶಿಕ್ಷಣ ಇಲಾಖೆ ವತಿಯಿಂದ ಸಕಲ ಸಿದ್ದತೆ ಮೇರೆಗೆ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನ ಆಗಮನ ಮಾಡಿಕೊಂಡ ಶಿಕ್ಷಕರು, ಅದೇ ರೀತಿ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದು ಸಾಮಾಜಿಕ ಅಂತರ ಮತ್ತು ಮಾಸ್ಕ ಹಾಕಿಕೊಂಡು ಆಗಮಿಸಿದ ವಿದ್ಯಾರ್ಥಿಗಳು.
ಕೊರೋನಾ ಪಾಸಿಟಿವ್ ದರ ಹೆಚ್ಚಿರುವ ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಶಾಲೆಗಳು ಪ್ರಾರಂಭವಾಗಿವೆ. ಮಕ್ಕಳು ಸಾಮಾಜಿಕ ಅಂತರ, ಸ್ಯಾನಿಟೈಸರ್, ಮುಖಕ್ಕೆ ಮಾಸ್ಕ್ ಧರಿಸಿಕೊಂಡು ತರಗತಿಗಳಲ್ಲಿ ತೆರಳುತ್ತಿದ್ದಾರೆ.