ಧಾರ್ಮಿಕದಲ್ಲಿ‌ನಡೆದರೆ ಜೀವನ ಸುಖಮಯ ಸಾಧ್ಯ: ಮಾತೆ ಸತ್ಯಕ್ಕಾ

  • 14 Jan 2024 , 11:12 PM
  • Belagavi
  • 106

ಹೊಸೂರ: ಮನುಷ್ಯ ಧಾರ್ಮಿಕ ಸಂಸ್ಕಾರ ಪಡೆದು ಅದರಂತೆ ನಡೆದಾಗ ಮಾತ್ರ ಜೀವನದಲ್ಲಿ ಸಾರ್ಥಕ ಬದುಕು ಸಾಧ್ಯ ಎಂದು ಬೀದರ ಬಸವ ಪೀಠದ ಪೂಜ್ಯ ಮಾತೆ ಸತ್ಯಕ್ಕಾ ಹೇಳಿದರು.

ಸೋಮವಾರ ಗ್ರಾಮದ ಗಂಗಮ್ಮ ಸಿದ್ದನಗೌಡರ ಎರಡನೆ ವರ್ಣದ ಹಾಗೂ ಶತಾಯುಷಿ ಯಮನಮ್ಮ ಮುನವಳ್ಳಿಯವರ ಸ್ಮರಣೋತ್ಸವ ನಿಮಿತ್ಯ ನಡೆದ ಸಾಧಕ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಪಶು ಪಕ್ಷಿಗಳು ಭೂಮಿಯ ಮೇಲೆ ಜನಿಸಿ ಅಂತ್ಯ ಹೊಂದುತ್ತವೆ. ಆದರೆ ಮಾನವನ ಜೀವನ ಭಿನ್ನವಾಗಿದ್ದು ಸಾರ್ಥಕ ಜೀವನ ಸಾಗಿಸಲು ಲಿಂಗಾಯತ ಧರ್ಮದ ಎಲ್ಲ ಸಂಸ್ಕಾರ ಪಡೆದುಕೊಳ್ಳಬೇಕು. ಮೌಢ್ಯಗಳಿಂದ ಹೊರಬರಬೇಕು ಸಮಾನತೆಯ ಹರಿಕಾರ, ಸ್ತ್ರೀಕುಲ ಉದ್ದಾರಕ ಜಗಜ್ಯೋತಿ ಬಸವಣ್ಣನವರು ಹುಟ್ಟುಹಾಕಿದ ಲಿಂಗಾಯತ ಧರ್ಮದ ನಿಜ ಆಚರಣೆಗಳನ್ನು ಮಾಡುತ್ತಾ ಶರಣರು ಕಂಡ ಕಲ್ಯಾಣ ಸಮಾಜ ನಿರ್ಮಿಸುವತ್ತ ನಮ್ಮ ಚಿತ್ತವಿರಬೇಕು. ಕೊರಳಲ್ಲಿ ಲಿಂಗಧಾರಣೆ ಮಾಡಿಕೊಂಡು ಶರಣರ ವಚನಗಳನ್ನು ಹೇಳುತ್ತಾ ಕಾಯಕ ದಾಸೋಹ ಮೈಗೂಡಿಸಿಕೊಂಡು ಧರ್ಮ ಜಾಗೃತಿ ಮಾಡಬೇಕಾಗಿದೆ ಎಂದರು.

ಮಹಾಂತೇಶ ಮಬ್ಬನೂರ ಪ್ರಾಸ್ತಾವಿಕವಾಗಿ ಮಾತನಾಡಿ, ಶರಣರು ಸಾವಿನಲ್ಲೂ ಮಹಾನವಮಿ ಕಂಡಿದ್ದರು. ಆದರೆ ಇಂದು ಅನೇಕ ಮೌಢ್ಯಗಳಿಗೆ ಅಂಟಿಕೊಂಡು ಲಿಂಗಾಯತ ಧರ್ಮದಲ್ಲಿ ನಿಧನರಾದಾಗ ಮಾಡುವ ಆಡಂಭರ ಸರಿಯಾದ ಕ್ರಮವಲ್ಲ. ಬಸವ ತತ್ವದಂತೆ ಲಿಂಗೈಕ್ಯರಾದ ವ್ಯಕ್ತಿಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಹೇಳುವುದರ ಮೂಲಕ ವಚನ ಸಾಹಿತ್ಯ ಪಠಿಸುವದರೊಂದಿಗೆ ಅಂತ್ಯಸಂಸ್ಕಾರ ನೇರವೆರಿಸಬೇಕು ಎಂದರು. ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಪ್ರತಿಭಾ ಪುರಸ್ಕಾರ ನೆರವೆರಿಸಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿರುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವದರೊಂದಿಗೆ ಮುಂಬರುವ ವಿದ್ಯಾರ್ಥಿಗಳಿಗೆ ಪ್ರೇರಣೆ ಸಿಗಲಿ ಎಂಬ ಮಹಾದಾಸೆಯಿಂದ ನಮ್ಮ ತಾಯಿಯ ಸ್ಮರಣೆಯಲ್ಲಿ ಪ್ರತಿ ವರ್ಷ ನಡೆಸುವ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಲೆಂದು ಹಾರೈಸಿದರು.

ಗ್ರಾಮದ ಕು ತರುನಂ ಖನಗಾಂವಿ ತುಮಕೂರು ಎಸ್ಎಮ್ಐಟಿ ಇಂಜನಿಯರಿಂಗ್ ಕಾಲೇಜನಲ್ಲಿ ಇಲೆಕ್ಟ್ರಾನಿಕ್ಸ್ ದಲ್ಲಿ ಪ್ರಥಮ rank ಪಡೆದರೆ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಷು ಅಂಕ ಗಳಿಸಿದ ಸೌಮ್ಯ ಯರಡಾಲ, ರೂಪಾ ಸತ್ತಿಗೇರಿ, ಗಂಗಾಧರಗೌಡ ಸಿದ್ದನಗೌಡರ ಹಾಗೂ ಶಿವುಕುಮಾರ ನೇಸರಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಬಸವ ತತ್ವ ಪ್ರಚಾರಕರಾದ ದೇಮಪ್ಪ ಯರಡಾಲ, ಮಡಿವಾಳಪ್ಒ ಸಂಗೊಳ್ಳಿ, ಮಹಾಂತೇಶ ಮಬ್ಬನೂರ, ರಾಜು ಮೂಗಬಸವ ಅವರನ್ನು ಸತ್ಕರಿಸಲಾಯಿತು. ವೇದಿಕೆಯ ಮೇಲೆ ಸವದತ್ತಿ ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಬಿ.ಸಿದ್ದನಗೌಡರ, ಚಿನ್ನಪ್ಪ ಹುಂಬಿ, ನಾಗಪ್ಪ ಮಾಕಿ, ಬಸಪ್ಪ ಶಿದ್ನಾಳ, ಮಡಿವಾಳಪ್ಪ ಸಂಗೊಳ್ಳಿ ಇದ್ದರು. ಕಾರ್ಯಕ್ರಮದಲ್ಲಿ ಸಂತೋಷ ಸಿದ್ದನಗೌಡರ, ಅಶೋಕ ಮಸ್ಕಿ, ಈರಣ್ಣ ಬೇಂಡಿಗೇರಿ, ಮೋಹನ ವಕ್ಕುಂದ, ಮಲ್ಲಿಕಾರ್ಜುನ ವಕ್ಕುಂದ, ಮಲ್ಲಿಕಾರ್ಜುನ ಹುಂಬಿ, ಯಲ್ಲಪ್ಪ ಮೂಗಬಸವ, ಫಕಿರಪ್ಪ ಬೋಳೆತ್ತಿನ, ಶಿವು ಮಾಕಿ, ಮಲ್ಲಿಕಾರ್ಜುನ ಬೋಳೆತ್ತಿನ, ಗೌಡಪ್ಪ ಹೊಸಮನಿ, ಶಿವು ಚಿಕ್ಕೊಪ್ಪ,ರಾಮಣ್ಣಾ ಬಾಳೆಕುಂದರಗಿ, ಈರಣ್ಣ ಪಾಟೀಲ, ಮಂಜು ಬುಡಶೆಟ್ಟಿ, ಧರೆಪ್ಪ ಜೋತಗನ್ನವರ, ಗದಿಗೆಪ್ಪ ನಾಗನೂರ, ಸೋಮಪ್ಪ ಯರಡಾಲ, ಶಿವಪ್ಪ ಬಾಳೆಕುಂದರಗಿ, ಸಂಜು ಪಾಟೀಲ,ಮುನೀರ ಶೇಖ, ಮಲ್ಲಪ ಯರಡಾಲ, ರಾಯಪ್ಪ ಗುಮಗೋಳ ಗೌಸ ಮುಲ್ಲಾ ಹಾಗೂ ನೂರಾರ ಬಸವಾಭಿಮಾನಿಗಳು ಇದ್ದರು. ಎಸ್.ಕೆ.ಮೆಳ್ಳಿಕೇರಿ ಸ್ವಾಗತಿಸಿದರು, ದೇಮಪ್ಪ ಸಂಗೊಳ್ಳಿ ವಂದಿಸಿದರು ಸುಭಾಷ್ ಸಂಗೊಳ್ಳಿ ನಿರೂಪಿಸಿದರು

Read All News