ಜನರಿಲ್ಲದೆ ಬಿಕೋ ಎನ್ನುತ್ತಿರುವ ಕುಂದಾನಗರಿ ಬೆಳಗಾವಿ

  • 15 Jan 2024 , 3:17 AM
  • Belagavi
  • 105

ಬೆಳಗಾವಿ: ರಾಜ್ಯಾದ್ಯಂತ ಭಾನುವಾರ ಸಂಪೂರ್ಣ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಕುಂದಾನಗರಿ ಬೆಳಗಾವಿ ಸಂಪೂರ್ಣ ಸ್ತಬ್ಧವಾಗಿದೆ. ದಿನನಿತ್ಯ ಸಾವಿರಾರು ಜನ ಸಂಚರಿಸುತ್ತಿದ್ದ ರಸ್ತೆಗಳು ಇಂದು ಖುಲಂ ಕುಲ್ಲಾ ಆಗಿದೆ ಹಾಗೂ ಮೊದಲಾದ ಸಾರ್ವಜನಿಕ ಸ್ಥಳಗಳು ಜನರಿಲ್ಲದೆ ಬಿಕೋ ಎನ್ನುತ್ತಿವೇ. ಸಾರಿಗೆ ಬಸ್‌ಗಳು, ಆಟೊರಿಕ್ಷಾಗಳು ರಸ್ತೆಗಿಳಿದಿಲ್ಲ. ನಗರದ, ರಸ್ತೆಗಳು, ವೃತ್ತಗಳು ಕೊರೋನಾ ಸೊಂಕು ಹರಡುವದನ್ನು ತಡೆಯಲು ಪ್ರತಿ ಭಾನುವಾರ ಸರ್ಕಾರ ರಾಜ್ಯಾದ್ಯಂತ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಖಡಕ್ ಲಾಕ್ ಡೌನ್ ಅನುಷ್ಠಾನಗೊಂಡಿದೆ.ನಗರ ಪ್ರವೇಶ ಮಾಡುವ ನಾಲ್ಕೂ ದಿಕ್ಕುಗಳಲ್ಲಿ ಎಲ್ಲ ಪ್ರವೇಶ ಮಾರ್ಗಗಳಲ್ಲಿ ಪೋಲೀಸರ ಬಿಗಿ ಬಂದೋಬಸ್ತ ಮಾಡಲಾಗಿದೆ.ಬೆಳಗಾವಿ ನಗರದಲ್ಲಿ ಸರ್ಕಾರ ಘೋಷಣೆ ಮಾಡಿದ ಲಾಕ್ ಡೌನ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Read All News