ಹಿಂಡಲಗಾ ಜೈಲಿನಿಂದ ಖೈದಿಗಳು ಪರಾರಿ

  • 15 Jan 2024 , 12:55 AM
  • Belagavi
  • 177

ಬೆಳಗಾವಿ: ಪೆರೋಲ್‌ರಜೆಯ ಮೇಲೆ ತೆರಳಿದ ಬೆಳಗಾವಿಯ ಹಿಂಡಲಗಾಕೇಂದ್ರಕಾರಾಗೃಹದ ಶಿಕ್ಷಾ ಬಂಧಿ ಆರೋಪಿಗಳಾದ ರಮೇಶ ವೆಂಕಟರವಣಪ್ಪಕುರಿ ಹಾಗೂ ಈಶ್ವರ ಮಲ್ಲಪ್ಪಾ ವಗ್ಗರಕಾರಾಗೃಹಕ್ಕೆ ಮರಳಿ ಶರಣಾಗದೇ ತಲೆಮರೆಸಿಕೊಂಡಿದ್ದಾರೆ.

ಆರೋಪಿ ರಮೇಶನಿಗೆಜಿಲ್ಲೆಯ ಅನಗೋಳದ ಮುಸ್ಲಿಂ ಗಲ್ಲಿಯ ಅಯಾಜ್ ಮೆಹಬೂಬ ಅಲಿ ಶೇಖ ಜಾಮೀನಿನ ಮೇಲೆ ಹೋಗಲು ಜಾಮೀನುದಾರನಾಗಿದ್ದು, ಕೋವಿಡ್ -19 ಪ್ರಯುಕ್ತ ಸರ್ಕಾರದ ಆದೇಶದಂತೆ ಆರೋಪಿ ರಮೇಶನು ಮೇ 15 ರಿಂದಆಗಸ್ಟ್ 16 ವರೆಗೆ 90 ದಿನಗಳ ಕೋವಿಡ್-19 ಪ್ರಯುಕ್ತ ಪೆರೋಲ್‌ರಜೆಯ ಮೇಲೆ ಹೋಗಿದ್ದು, ಆಗಸ್ಟ್ 17 ಸಾಯಂಕಾಲ 5:30 ಗಂಟೆಗೆ ಕಾರಾಗೃಹಕ್ಕೆ ಮರಳಿ ಶರಣಾಗಿಲ್ಲ. ಆರೋಪಿ ರಮೇಶ ವೆಂಕಟರವಣಪ್ಪಕುರಿತುಮಕೂರುಜಿಲ್ಲೆಯ ಮಧುಗಿರಿತಾಲ್ಲೂಕಿನ ಹಳಿಹಟ್ಟಿ ಗ್ರಾಮದವನಾಗಿದ್ದಾನೆ.

ಈತನ ವಯಸ್ಸು 33 ವರ್ಷಆಗಿದ್ದು, ಕಪ್ಪು ಮೈಬಣ್ಣ ಹೊಂದಿದ್ದಾನೆ. ಉದ್ದನೆಯ ಮುಖ ಹಾಗೂ ಸದೃಢ ಮೈಕಟ್ಟು ಹೊಂದಿದ್ದಾನೆ. ಅದೇರೀತಿ, ಈಶ್ವರ ಮಲ್ಲಪ್ಪ ವಗ್ಗರ ಈತನು ಮೇ 15 ರಿಂದಆಗಸ್ಟ್ 14ರವರಿಗೆ 90 ದಿನಗಳ ಕೋವಿಡ್ -19 ಪ್ರಯುಕ್ತ ಸಿದ್ದಪ್ಪ ಮಾರುತಿ ಸಿದ್ದನ್ನವರ್ ನೀಡಿದಜಾಮೀನಿನ ಆಧಾರವಾಗಿ ಪೆರೋಲ್‌ರಜೆಯ ಮೇಲೆ ಹೋಗಿದ್ದುಆಗಸ್ಟ್ 15 ರಂದು ಮತ್ತೆಕಾರಾಗೃಹಕ್ಕೆ ಶರಣಾಗದೆ ತಲೆಮರೆಸಿಕೊಂಡಿದ್ದಾನೆ.

ಈಶ್ವರ್ ಮಲ್ಲಪ್ಪ ವಗ್ಗರ್ ಈತನು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನಚಿಕ್ಕನಿಂದಿ ಗ್ರಾಮದವನು. ವಯಸ್ಸು 57 ವರ್ಷ ಸಧೃಡ ಮೈಕಟ್ಟು, ಉದ್ದ ಮುಖ ಹೊಂದಿದ್ದಾನೆ. ಈ ಕುರಿತು, ಕೇಂದ್ರಕಾರಾಗೃಹದ ಸಹಾಯಕಅಧೀಕ್ಷಕರಾದ ಶಾಬುದ್ದೀನ್ ಮಸಾಕಸಾಬ ಕಾಲೇಖಾನ ಬೆಳಗಾವಿ ಗ್ರಾಮೀಣ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗುತ್ತಿದೆ. ಈ ಪ್ರಕಾರ ಚಹರೆಯುಳ್ಳ ಆರೋಪಿತರ ಬಗ್ಗೆ ಮಾಹಿತಿದೊರೆತಲ್ಲಿ ಪೊಲೀಸ್‌ಆಯುಕ್ತರು, ಬೆಳಗಾವಿ ನಗರಅಥವಾ ಪೊಲೀಸ್‌ಇನ್ಸಪೆಕ್ಟರ್ ಬೆಳಗಾವಿ ಗ್ರಾಮೀಣ ಪೊಲೀಸ್‌ಠಾಣೆ ಬೆಳಗಾವಿ ಇವರಿಗೆ ಸಂಪರ್ಕಿಸಬೇಕು.

ಪೋಲೀಸ್ ಕಂಟ್ರೋಲ್‌ 0831-2405233
ಹಾಗೂ ಪಿ.ಐ.ಬೆಳಗಾವಿ ಗ್ರಾಮೀಣ ಪೊಲೀಸ್‌ಠಾಣೆಯ
: 9480804031
ಅಥವಾ ಬೆಳಗಾವಿ ಗ್ರಾಮೀಣ ಪೊಲೀಸ ಠಾಣೆ 0831-2405252 ನ್ನು ಸಂಪರ್ಕಿಸಬಹುದುಎಂದು ಬೆಳಗಾವಿ ಗ್ರಾಮೀಣ ಪೊಲೀಸ್‌ಠಾಣೆಯಎ.ಎಸ್.ಐ. ಎಚ್.ಎಚ್. ಪಮ್ಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read All News