ಅಕ್ರಮ ಮದ್ಯ ಸಾಗಣಿಕೆ: ಇಬ್ಬರ ಬಂಧನ

  • 30 Dec 2023 , 5:54 PM
  • Belagavi
  • 168

ಬೆಳಗಾವಿ:ಗೋವಾ ರಾಜ್ಯದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ರೂಪಾಯಿ 273192 ಮೌಲ್ಯದ ಮದ್ಯ ಪೆಟ್ಟಿಗೆಯನ್ನು ಆ.27 ರಂದು ಟಾಟಾ ಗೂಡ್ಸ್ ಕ್ಯಾರಿಯರ್ ವಾಹನವನ್ನು ಬೆಳಗಾವಿ ಉಪ ವಿಭಾಗದ ಅಬಕಾರಿ ನಿರೀಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ವಶಕ್ಕೆ ತೆಗೆದುಕೊಂಡಿದ್ದಾರೆ.

ಚೆನ್ನಮ್ಮ ಸರ್ಕಲ್‌ನಿಂದ ಬಾಚಿ ಗ್ರಾಮಕ್ಕೆ ಹೋಗುವ ರಸ್ತೆಯ ಗಣಪತಿ ಮಂದಿರದ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ 128 ಪೆಟ್ಟಿಗೆಯಲ್ಲಿ 1152.ಲೀಟರ ಗೋವಾ ಮದ್ಯ ಮತ್ತು 19 ಪೆಟ್ಟಿಗೆಗಳಲ್ಲಿ 228.ಲೀ ಗೋವಾ ಬೀಯರನ್ನು, ಸಾಗಿಸುತ್ತಿದ್ದು, ವಾಹನ ಹಾಗೂ ಚಾಲಕರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿತರಾದ ನಾಗಯ್ಯ ಬಸಯ್ಯ ವಿಭೂತಿ (33) ಕುಮಾರ ಈರಣಗೌಡಾ ಪಾಟೀಲ (26) ಕಿತ್ತೂರ ತಾಲೂಕಿನ ಖೋದಾನಪೂರ ಗ್ರಾಮದವರು ಎಂದು ತನಿಖೆಯಲ್ಲಿ ತಿಳಿದು ಬಂದಿದ್ದು, ವಾಹನದ ಮಾಲೀಕನ ಶೋಧ ಮಾಡಲಾಗುತ್ತಿದೆ.

ಸದರಿ ದಾಳಿಯನ್ನು ಬೆಳಗಾವಿಯ ಕೇಂದ್ರ ಸ್ಥಾನದ ಅಬಕಾರಿ ಅಪರ ಆಯುಕ್ತರಾದ ಡಾ:ವೈ ಮಂಜುನಾಥ, ಬೆಳಗಾವಿ (ದಕ್ಷಿಣ) ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಜಯರಾಮೇಗೌಡ, , ಹಾಗೂ ಬೆಳಗಾವಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಚನಗೌಡ ಎಸ್ ಪಾಟೀಲ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕರಾದ ಮಂಜುನಾಥ ಗಲಗಲಿ ಇವರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.

ಸದರಿ ದಾಳಿಯಲ್ಲಿ ಅಬಕಾರಿ ನಿರೀಕ್ಷಕರು ಲಿಂಗರಾಜ.ಕೆ, ಅಬಕಾರಿ ಉಪ ನಿರೀಕ್ಷಕರು ಎ.ವ್ಹಿ.ರಾವಳ, ಅಬಕಾರಿ ಮುಖ್ಯ ಪೇದೆಯಾದ ಎ.ಡಿ.ಜಾದವ, ಅಬಕಾರಿ ಪೇದೆಗಳಾದ ಸುನೀಲ ಪಾಟೀಲ, ಬಿ.ಎಸ್.ಅಟಿಗಲ್, ಎಂ.ಎಫ್.ಕಟಗೆನ್ನವರ, ವಾಹನ ಚಾಲಕರಾದ ಆಯ್.ಸಯ್ಯದ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು ಎಂದು ಬೆಳಗಾವಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read All News