ನೂತನ ಕಾರಗೆ ಸ್ಮಶಾನದಲ್ಲಿ ಪೂಜೆ, ಐತಿಹಾಸಿಕ ಹೆಜ್ಜೆಗೆ ಮುಂದಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
- 9 Jan 2024 , 5:53 AM
- Belagavi
- 202
ಬೆಳಗಾವಿ: ಪ್ರತಿ ವರ್ಷ ಬೆಳಗಾವಿಯ ಸದಾಶಿವ ನಗರದ ಸ್ಮಶಾನದಲ್ಲಿ ಕಾರ್ಯಕ್ರಮ ನಡೆಸಿ ಸ್ಮಶಾನದಲ್ಲಿ
24 ಗಂಟೆಗಳ ಕಾಲ ನಿರಂತರ ವಿವಿಧ ಕಾರ್ಯಕ್ರಮಗಳ ಜೊತೆ ಸತೀಶ್ ಜಾರಕಿಹೊಳಿ ಸ್ಮಶಾನದಲ್ಲಿ ವಾಸ್ತವ್ಯ ಮಾಡುವ ಮೂಲಕ ಮೂಢ ನಂಬಿಕೆ ವಿರುದ್ಧ ಹೋರಾಟ ನಡೆಸುತ್ತಿದ್ದ
ಶಾಸಕ ಸತೀಶ ಈಗ ಮತ್ತೊಂದು ಐತಿಹಾಸಿಕ ಹೆಜ್ಜೆಗೆ ಮುಂದಾಗಿದ್ದಾರೆ. ಹೊಸ ಕಾರು ಖರೀದಿಸಿದಾಗ ಸಾಮಾನ್ಯವಾಗಿ ಎಲ್ಲರೂ ದೇವಸ್ಥಾನಕ್ಕೆ ಒಯ್ದು ಪೂಜೆ ಮಾಡಿ ಸವಾರಿ ಆರಂಭಿಸುತ್ತಾರೆ. ಆದರೆ ಸತೀಶ್ ಜಾರಕಿಹೊಳಿ ಮಾತ್ರ ಅದೆಲ್ಲವನ್ನು ಬಿಟ್ಟು ಜನರಲ್ಲಿ ವೈಚಾರಿಕತೆ ಬಿತ್ತಲು ತಮ್ಮ ನೂತನ ಕಾರಿನ ಚಾಲನೆಗೆ ಸ್ಮಶಾನ ಭೂಮಿ ಆಯ್ಕೆ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ 11ಕ್ಕೆ ಬೆಳಗಾವಿಯ ಸದಾಶಿವನಗರದ ಸ್ಮಶಾನ ಭೂಮಿಯಲ್ಲಿಈ ಕಾರಿಗೆ ಚಾಲನೆ ಸಿಗಲಿದೆ. ಜನರು ಸಾಮಾಜಿಕ ಜಾಲತಾಣದ ಮೂಲಕ ಕಾರ್ಯಕ್ರಮದ ನೇರ ಪ್ರಸಾರ ಇರುತ್ತೆ. ಮೌಢ್ಯದ ವಿರುದ್ಧ ಹೋರಾಡುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಮ್ಮ
ಹೊಸ ಫಾರ್ಚುನರ್ ಕಾರ್‌ನ ಪ್ರಯಾಣವನ್ನು ಸ್ಮಶಾನದಿಂದ ಪ್ರಾರಂಭ ಮಾಡುವುದು ವಿಶೇಷವಾಗಿದೆ.