ಕಾಂಗ್ರೆಸ್ ಜೀವಂತ ಇದ್ದವರನ್ನು ಬದುಕಲು ಬಿಡಲಿಲ್ಲ: ಕಟೀಲ

  • 14 Jan 2024 , 11:49 PM
  • Belagavi
  • 91

ಬೆಳಗಾವಿ :ಕಾಂಗ್ರೆಸ್ ಜೀವಂತ ಇದ್ದವರನ್ನು ಬದಕಲು ಬಿಡಲಿಲ್ಲ.ಕಾಂಗ್ರೆಸ್ ಗೆ ನೈತಿಕ ಪ್ರಶ್ನೆ ಇಲ್ಲ. ಡಿಕೆಶಿಗೆ ಕಾನೂನುನಿನ ಅರಿವಿಲ್ಲ. ಅವರು ತಿಹಾರ ಜೈಲಿಗೆ ಹೋಗಿ ಬಂದವರು. ಅವರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಹರಿಹಾಯ್ದರು.

ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದರು.ಮೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಘೋಷಣೆಯಾಗಿ ಮತದಾರರ ಮನೆ ಮನೆಗೆ ಹೋಗಿ ಬಿಜೆಪಿಯ ಅಭ್ಯರ್ಥಿಗಳು ಪ್ರಚಾರ ನಡೆಸಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಒಳ್ಳೆಯ ವಾತಾವರಣ ಇದೆ. 45 + ವಾಡ್೯ನಲ್ಲಿ ಗೆಲವು ಸಾಧಿಸಲಿದ್ದೇವೆ ಎಂದರು.

ಹುಬ್ಬಳ್ಳಿ ಧಾರವಾಡ, ಕಲಬುರಗಿಯಲ್ಲಿಯೂ ಒಳ್ಳೆಯ ವಾತಾವರಣ ಇದೆ.ಬಿಜೆಪಿ ಅಧಿಕಾರ ಬರುವುದು ಖಚಿತ ಎಂದರು. ಬೆಲೆ ಏರಿಕೆಯಾಗಿರುವುದನ್ನು ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರಕಾರ ಬದ್ಧವಾಗಿದೆ. ಯುಪಿಎ ಸರಕಾರ ಕಾಲಘಟದಲ್ಲಿ ಆದ ಲೋಪದೋಷಗಳನ್ನು ಮೋದಿ‌ ಸರಕಾರ ಮಾಡುತ್ತಿದೆ ಎಂದರು.

Read All News