ಶ್ರೀ ಶಿವಸಾಗರ ಶುಗರ್ ಲಿಮಿಟೆಡ್ ಪ್ರಾರಂಭಿಸಿ : ಅಶೋಕ್ ಪಟ್ಟಣ

  • 14 Jan 2024 , 9:59 PM
  • Belagavi
  • 106

ರಾಮದುರ್ಗ: ಶ್ರೀ ಶಿವಸಾಗರ ಶುಗರ್ ಲಿಮಿಟೆಡ್ ೨೦೧೧ ರಲ್ಲಿ ಸ್ಥಾಪಿಸಲಾದ ಅತ್ಯುತ್ತಮ, ಅತ್ಯಾಧುನಿಕ ಯಂಶೋಪಕರಣಗಳನ್ನು ಹೊಂದಿದ ಒಂದು ಮಾದರಿ ಸಕ್ಕರೆ ಸಂಸ್ಥೆ ಈ ಭಾಗದ ಪ್ರಾದೇಶಿಕಾಭಿವೃದ್ಧಿ ಮತ್ತು ಜನರ ಮೂಲಭೂತ ಸೌಕರ್ಯಗಳನ್ನು ವೃದ್ಧಿ ಮಾಡುವ ಒಂದು ಮೂಲಭುತ ಉದ್ಯಮವು ಹೌದು, ಸನ್ 2011 ರಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಉದಮಡಿ ಗ್ರಾಮದಲ್ಲಿ ಪ್ರಾದೇಶಿಕ / ಸ್ಥಳೀಯ ಅಭಿವೃದ್ಧಿ, ಉದ್ಯೋಗಾವಕಾಶಗಳ ಸೃಷ್ಟಿ, ರೈತ ಸಮುದಾಯದ ಸಮಗ್ರ ಅಭಿವೃದ್ಧಿ, ಕಬ್ಬು ಬೆಳೆಗಾರರ ಆಶಾಕಿರಣವಾಗಿ ಒಂದು ಅತ್ಯುತ್ತಮ ಕಾರ್ಖಾನೆ ಸೌಕರ್ಯಗಳ ಅನೂಕೂಲವಾಗಲೆಂದು ಪ್ರಾರಂಭಿಸಲಾಯಿತು.

ನಿಜವಾದ ಸಂಗತಿ ಏನೆಂದರೆ ಶ್ರೀ ಆನಂದ ಕುಲಕರ್ಣಿ ಮತ್ತು ಶಾಸಕರಾದ ಮಹಾದೇವಪ್ಪ ಯಾದವಾಡ ಅವರು ಸಹವರ್ತಿಗಳು ಶಿವಸಾಗರ ಸಕ್ಕರೆ ಕಾರ್ಖಾನೆಯನ್ನು ಕೇವಲ ತಮ್ಮ ಹಿಡಿತದಲ್ಲಿ ತಂದುಕೊಳ್ಳುವ ಸಲುವಾಗಿ ವಿನಾಕಾರಣ ತೊಂದರೆ ನೀಡಿ ಕಾರ್ಖಾನೆಯನ್ನು ಈ ಹಿಂದೆನೂ ಬಂದ ಮಾಡಿಸಿರುತ್ತಾರೆ. ಈಗ ರೈತರ ಹಿದೃಷ್ಟಿಯಿಂದ ಕಾರ್ಖಾನೆಯನ್ನು ಪುರ್ನ ಪ್ರಾರಂಭ ಮಾಡಲು ಶಿವಸಾಗರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿದೇರ್ಶಕರಾದ ರಾಜೇಂದ್ರ ಪಾಟೀಲ ಅವರು ಅರಿಯಂತ ಸುಗರ್ ಗೋರಗಾಂವ ಇವರ ಆಡಳಿತಯ ಜೋತೆ ಒಪ್ಪಂದ ಮಾಡಿಕೊಂಡು ಕಾರ್ಖನೆ ಪ್ರಾರಂಭ ಮಾಡಲಾಗಿದೆ. ಎಂದು ತಿಳಿದು ಬಂದಿದೆ.

ಯಾವುದೇ ನ್ಯಾಯಾಲಯದಲ್ಲಿ ಶಿವಸಾಗರ ಸಕ್ಕರೆ ಕಾರ್ಖಾನೆಯನ್ನು ಮರ್ನ ಪ್ರಾರಂಭಿಸಲು ತಡೆಯಾಜ್ಞೆ ಇರುವುದಿಲ್ಲ ಎಂದು ತಿಳಿದು ಬಂದಿದ್ದು ರೈತರ ಬಾಕಿ ಇರುವ ಕಬ್ಬಿನ ಬಿಲ್ಲನ್ನು ಕಾರ್ಖಾನೆ ಪ್ರಾರಂಭವಾದ ನಂತರ ಹಂತ ಹಂತವಾಗಿ ಕಬ್ಬು ಬೆಳೆಗಾರರ ಜೊತೆ ಚರ್ಚಿಸಿ ಅರಿಯಂತ ಸುಗರ್ ಗೋರಗಾಂವ ಇವರು ಬಾಕಿ ಬಿಲ್ಲನ್ನು ನೀಡಲು ತೀರ್ಮಾನಿಸಿದ್ದಾರೆ ಎಂದು ನನಗೆ ತಿಳಿದು ಬಂದಿದೆ.

ಶ್ರೀ ಆನಂದ ಕುಲಕರ್ಣಿ ಮತ್ತು ಶಾಸಕರಾದ ಶ್ರೀ ಮಹಾದೇವಪ್ಪಾ ಎಸ್, ಯಾದವಾಡ, ಮತ್ತು ಅವರ ಪತ್ರ ಪ್ರಶಾಂತ ಯಾದವಾಡ ಆಡಳಿತ ಮಂಡಳಿಯ ಸದಸ್ಯರಾಗಿದ್ದರು ಕಾರಣಾಂತರದಿಂದ ಇವರನ್ನು ಅಧ್ಯಕ್ಷರಾದ ವ್ಯಸ್ಥಾಪಕ ನಿರ್ದೇಶಕರರಾದ ರಾಜೇಂದ್ರ ಪಾಟೀಲ ಅವರು ಇವರನ್ನು ಸದಸ್ಯತ್ವದಿಂದ ಕಾನೂನು ಬದ್ಧವಾಗಿ ತೆಗೆದು ಹಾಕಿದ್ದರು.

ಕಾರಣ ಆನಂದ ಕುಲಕರ್ಣಿ ಹಾಗೂ ಶಾಸಕರಾದ ಮಹಾದೇವಪ್ಪ ಯಾದವಾಡ ಅವರು ಕಾರ್ಖಾನೆಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ ದೂರಾಲೋಚನೆಯಿಂದ ಸೋಲಿಸ ಹಾಗೂ ತಾಲೂಕಾ ದಂಡಾಧಿಕಾರಿಗಳು ಹಾಗೂ ಇತರ ಇಲಾಖೆಯ ಮೇಲೆ ಒತ್ತಡ ಹೇರುವ ಮೂಲಕ ಪ್ರಸುತ್ತ ರಾರ್ವಾನೆಯ ನಿರ್ವಹಿಗೆ ತೊಂದರೆ ಉಂಟು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಶಾಸಕರು ಸ್ವ ಹಿತಾಸಕ್ತಿಯನ್ನು ಬಿಟ್ಟು ಹಾಗೂ ರೈತ ವಿರೋಧಿ ಚಟುವಟಿಗಳನ್ನು ಬಿಟ್ಟು ಕಾರ್ಖಾನೆಯನ್ನು ಪ್ರಾರಂಭಿಸಲು ಸಹಕರಿಸಬೇಕು. ಮತ್ತು ನೂರಾರು ಉದ್ಯೋಗವನ್ನು ನೀಡುವ ಈ ಸಕ್ಕರೆ ಕಾರ್ಖಾನೆಯ ಯಂತ್ರೋಕರಣಗಳು ಜನರಿಗೆ ಹಿಡಿದು, ಕಾರ್ಖಾನೆ ಸಂರ್ಪೂಣ ಹಾಳಾಗಿ ಹೋಗಬಾರದು ಹಾಗೂ ರೈತರ ಆರ್ಥಿಕ ಭದ್ರತೆಗೆ ಭುನಾದಿಯಾಗಬೇಕು ಎಂಬ ಆಸೆ ನಮ್ಮದಾಗಿದೆ.
ಅಶೋಕ. ಮ.ಪಟ್ಟಣ(ಮಾಜಿ ಶಾಸಕರು ರಾಮದುರ್ಗ)

Read All News