ಬೆಳಗಾವಿಯಲ್ಲಿ ಮತ್ತೆ 27 ಹೊಸ ಕೊರೋನಾ ಸೋಂಕಿತರು ಪತ್ತೆ, ಎರಡು ಸಾವು

  • 19 Dec 2023 , 5:44 AM
  • Belagavi
  • 102

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಮುಂದುವರೆದ ಕರೋನಾ ಆರ್ಭಟ ಜಿಲ್ಲೆಯಲ್ಲಿ ಇಂದು ಸೋಮವಾರ 27 ಕೊರೋನಾ ಸೊಂಕಿತರು ಪತ್ತೆಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 497 ಕ್ಕೇ ಏರಿಕೆ ಯಾಗಿದೆ. ಕೊರೋನಾ ಮಹಾಮಾರಿಗೆ ಇಂದು ಇಬ್ಬರು ಬಲಿಯಾಗಿದ್ದು ,ಜಿಲ್ಲೆಯಲ್ಲಿ ಈವರೆಗೆ 9 ಜನ ಬಲಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಪತ್ತೆಯಾದ 27 ಜನ ಸೊಂಕಿತರಲ್ಲಿ ಬೆಳಗಾವಿ ತಾಲೂಕಿನಲ್ಲಿ 13, ಅಥಣಿ ತಾಲೂಕಿನಲ್ಲಿ 11, ಗೋಕಾಕ್, ಬೈಲಹೊಂಗಲ, ರಾಮದುರ್ಗ ತಾಲೂಕುಗಳಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿದ್ದಾರೆ. ಜಿಲ್ಲೆಯಲ್ಲಿ 362 ಗುಣಮುಖರಾಗಿ ಬಿಡುಗಡೆ, ಕೋವಿಡ್ ಗೆ ಬಲಿಯಾದವರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ, ಸಕ್ರೀಯ ಪ್ರಕರಣಗಳು 121 ಪಾಸಿಟಿವ್ ಪ್ರಕರಣ ದಾಖಲಾಗಿವೆ.

Read All News