ಪಾಕಿಸ್ತಾನದ ನರಿ ಬುದ್ದಿ ವಿರುದ್ದ ಗುಡುಗಿದ ಪಂಜ್‌ಶಿರ್‌ ಹುಲಿ

  • 5 Jan 2024 , 6:18 PM
  • world
  • 120

ಪಂಜ್‌ಶಿರ್‌: ಅಹ್ಮದ್ ಮಸೂದ್ 19 ನಿಮಿಷಗಳ ಆಡಿಯೋವನ್ನು ಬಿಡುಗಡೆ ಮಾಡಿದ್ದು, ಪಂಜಶೀರನಲ್ಲಿ ಪಾಕಿಸ್ತಾನ ಮತ್ತು ತಾಲಿಬಾನ್ ಬಾಂಬ್ ಸ್ಫೋಟ ಮಾಡಿದೆ ಎಂದು ದೃಢಪಡಿಸಿದ್ದಾರೆ, ಈ ಸ್ಫೋಟದಲ್ಲಿ ಫಾಹೀಮ್ ಮತ್ತು ಮಸೂದ್ ಕುಟುಂಬ ಸದಸ್ಯರ ಸಾವಿಗೆ ಕಾರಣವಾಯಿತು. ತಾಲಿಬಾನ್ ವಿರುದ್ಧ ಪ್ರತಿಭಟನೆ ಮಾಡಲು ಅಫ್ಘಾನಿಸ್ತಾನ ಜನರನ್ನು ಕೇಳಿದ್ದಾರೆ ಮತ್ತು ಅಂತರರಾಷ್ಟ್ರೀಯ ಸಮುಧಾಯಕ್ಕೆ ಸಹಾಯ ಕೇಳಿದ್ದಾರೆ.

ಪಂಜ್‌ಶಿರ್‌ನಲ್ಲಿ ಹುತಾತ್ಮರಿಗೆ ಸಂತಾಪ ಸೂಚಿಸುವಾಗ ಅಹ್ಮದ್ ಮಸೂದ್ ಹೇಳುವಂತೆ ಪಾಕಿಸ್ತಾನವು ಪಂಜಶೀರ್‌ ಮೇಲೆ ನೇರವಾಗಿ ದಾಳಿ ಮಾಡಿತು ಮತ್ತು ಅಂತಾರಾಷ್ಟ್ರೀಯ ಸಮುದಾಯವು ಮೌನವಾಗಿ ವೀಕ್ಷಿಸಿತು. ಮಸೂದ್ ತನ್ನ ಕೊನೆಯ ಹನಿ ರಕ್ತದ ತನಕ ಕೈಬಿಡುವುದಿಲ್ಲ ಎಂದು ಹೇಳಿದ್ದಾರೆ. ತಾಲಿಬಾನ್ ಅನಾಗರಿಕರು ಪಾಕ್ ಸಹಾಯದಿಂದ ದಾಳಿ ಮಾಡುತ್ತಿದ್ದಾರೆ ಎಂದು ಅವರು ಗುಡುಗಿದರು.

ತಾಲಿಬಾನ್ ಬದಲಾಗಿಲ್ಲ ಎಂದು ಸಾಬೀತುಪಡಿಸಿದರು. ತಾಲಿಬಾನರು ಅಫ್ಘನ್ನರಲ್ಲ, ಅವರು ಹೊರಗಿನವರು ಮತ್ತು ಹೊರಗಿನವರಿಗೆ ಕೆಲಸ ಮಾಡುತ್ತಾರೆ ಮತ್ತು ಅಫ್ಘಾನಿಸ್ತಾನವನ್ನು ಪ್ರಪಂಚದ ಇತರ ಭಾಗಗಳಿಂದ ಪ್ರತ್ಯೇಕವಾಗಿಡಲು ಬಯಸುತ್ತಾರೆ. ಎಲ್ಲಾ ಆಫ್ಘನ್ನರು ಯಾವುದೇ ರೂಪದಲ್ಲಿ ಅಥವಾ ಸಾಧ್ಯವಿರುವ ರೀತಿಯಲ್ಲಿ ಪ್ರತಿರೋಧವನ್ನು ಸೇರಬೇಕು. ಪ್ರತಿರೋಧ ಇನ್ನೂ ಜೀವಂತವಾಗಿದೆ ಎಂದು ಮಸೂದ್ ಹೇಳಿದ್ದಾರೆ.

Read All News