ಪೊಲೀಸರ ಹಿತ ಕಾಪಾಡಲು ಸರಕಾರ ಬದ್ಧ: ಗೃಹ ಸಚಿವ ಜ್ಞಾನೇಂದ್ರ

  • 15 Jan 2024 , 3:57 AM
  • Belagavi
  • 124

ಬೆಳಗಾವಿದೇಶದಲ್ಲಿ ಗಡಿ ಕಾಯುವ ಸೈನಿಕರಿಗೆ ಯೋಧ ಕಾಣುತ್ತಾನೆ.ಆದರೆ ಪೊಲೀರಿಗೆ ನಮ್ಮಲ್ಲಿ ಇರುವ ವೈರಿ ಕಾಣುವುದಿಲ್ಲ ಅಂಥ ಕಿಡಿಗೇಡಿಗಳನ್ನು ಮಟ್ಟ ಹಾಕುವ ಕೆಲಸ ಮಾಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಬುಧವಾರ ನಗರದ ಕಂಗ್ರಾಳಿಯ ಕೆಎಸ್ ಆರ್ ಪಿಯ ಆವರಣದಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ತರಬೇತಿ ಶಾಲೆಯ ಮೊದಲನೇ ತಂಡದ 171 ಸಶಸ್ತ್ರ ಪೊಲೀಸ್ ಕಾನ್ಸಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಭಾಗವಹಿಸಿ ಮಾತನಾಡಿದರು. ಗಡಿಯಲ್ಲಿ ಇರುವ ಶತ್ರು ಕಾಣುತ್ತಾರೆ. ಆದರೆ ಪೊಲೀಸರ ಕಣ್ಣಿಗೆ ಕಾಣುವುದಿಲ್ಲ. ಜನರ ಮಾನ ಪ್ರಾಣಕ್ಕೆ ಕುತ್ತು ತರುವ ಕಿಡಿಗೇಡಿಗಳ ಹೆಡೆಮುರಿ ಕಟ್ಟಿ ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ಪೊಲೀಸ್ ಪಡೆಯ ಕಾರ್ಯ ಮಾಡಬೇಕು ಎಂದರು.

Read All News