ಪಿಯು ರಿಸಲ್ಟ್ ಈ ಭಾರಿ ಮತ್ತೆ ಹೆಣ್ಮಕ್ಳೇ ಸ್ಟ್ರಾಂಗ್, ಉಡುಪಿ, ದಕ್ಷಿಣ ಕನ್ನಡ ಫಸ್ಟ್, ವಿಜಯಪುರ ಲಾಸ್ಟ್

  • 30 Dec 2023 , 5:56 PM
  • Bengaluru
  • 119

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಬಾಲಕಿಯರೇಮೇಲುಗೈಸಾಧಿಸಿದ್ದಾರೆ. ರಾಜ್ಯಕ್ಕೆ ಉಡುಪಿ ಮತ್ತು ದಕ್ಷಿಣಕನ್ನಡಜಿಲ್ಲೆಗಳುಮೊದಲಸ್ಥಾನ ಅಲಂಕರಿಸಿದರೆ ವಿಜಯಪುರಜಿಲ್ಲೆಕೊನೇಸ್ಥಾನ ಪಡೆದಿದೆ ಎಂದು ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಸುರೇಶ್ಕುಮಾರ್ ಫಲಿತಾಂಶದ ಕುರಿತು ಮಾಹಿತಿ ನೀಡಿದರು.

2019-20ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಗೆ ಒಟ್ಟು 6,75,277 ಮಂದಿ ಹಾಜರಾಗಿದ್ದರು. ಈ ಪೈಕಿ ಹೊಸದಾಗಿ ಪರೀಕ್ಷೆ ಬರೆದವರು 5,56,267 ಮಂದಿ, ಪಾಸ್​ ಆದವರು 3,84,947, ಪುನರಾವರ್ತಿ ವಿದ್ಯಾರ್ಥಿಗಳ ಸಂಖ್ಯೆ 91,025 ಪಾಸ್​ ಆದವರು 25,602. ಒಟ್ಟು 4,17,297 ಮಂದಿ ಉತ್ತೀರ್ಣರಾಗಿದ್ದಾರೆ. ಫಲಿತಾಂಶದಲ್ಲಿ ಚಿತ್ರದುರ್ಗ (56.8 ಶೇ.),ರಾಯಚೂರು (56.22 ಶೇ.) ಹಾಗೂ ವಿಜಯಪುರ ಜಿಲ್ಲೆ (54.22 ಶೇ.) ಕೊನೆಯ ಮೂರು ಸ್ಥಾನದಲ್ಲಿವೆ. ಒಟ್ಟು 61.80 ಫಲಿತಾಂಶ ದಾಖಲಾಗಿದೆ. ತಲಾ 90.71 ಶೇ. ಫಲಿತಾಂಶ ದಾಖಲಿಸಿರುವ ಉಡುಪಿ ಮತ್ತು ದ.ಕ. ಜಿಲ್ಲೆಗಳು ಜಂಟಿಯಾಗಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದೆ. 81.53 ಶೇ. ಫಲಿತಾಂಶದೊಂದಿಗೆ ಕೊಡಗು ಜಿಲ್ಲೆ ತೃತೀಯ ಸ್ಥಾನ ಗಳಿಸಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, 68.73 ಶೇ. ಫಲಿತಾಂಶ ದಾಖಲಿಸಿದ್ದರೆ, ಬಾಲಕರು 54.77 ಶೇ. ಫಲಿತಾಂಶ ದಾಖಲಿಸಿದ್ದಾರೆ.

Read All News