ಗಡಿಭಾಗದ 5 ತಾಲೂಕುಗಳು ಲಾಕ್ ಡೌನ

  • 15 Jan 2024 , 4:55 AM
  • Belagavi
  • 110

ಬೆಳಗಾವಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಸೋಂಕು ಹರಡುವಿಕೆಯ ಪ್ರಕರಣಗಳು ತೀವ್ರವಾಗಿ ಹೆಚ್ಚಳವಾಗುತ್ತಿದೆ ಜೊತೆಗೆ ಗಡಿಭಾಗದಲ್ಲಿ ಕಳೆದ 2 ವಾರದದಿಂದ ಮರಣದ ಪ್ರಮಾಣವು ಹೆಚ್ಚಾಗಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಗಡಿಭಾಗದ ಗೋಕಾಕ, ಮೂಡಲಗಿ, ಅಥಣಿ, ಕಾಗವಾಡ ಹಾಗೂ ನಿಪ್ಪಾಣಿ ತಾಲೂಕುಗಳಲ್ಲಿ ದಿನಾಂಕ14.07.2020 ರ ರಾತ್ರಿ 8.00 ಗಂಟೆಯಿಂದ 22.07.2020ರ ವರೆಗೆ ಬೆಳಿಗ್ಗೆ 5.00 ಗಂಟೆಯವರೆಗೆ 7 ದಿನಗಳ ಅವಧಿಯವರೆಗೆ ಲಾಕ್ ಡೌನ್ ಜಾರಿ ಮಾಡಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶಿಸಿದ್ದಾರೆ. ಜೊತೆಗೆ ಬೆಳಿಗ್ಗೆ 5 ಗಂಟೆಯಿಂದ ಮದ್ಯಾಹ್ನ 12 ಗಂಟೆಯವರೆಗೆ ಸಾರ್ವಜನಿಕರಿಗೆ ಅವಶ್ಯಕ ವಸ್ತುಗಳನ್ನು ಖರೀಧಿಸಲು ವಿನಾಯಿತಿ ನೀಡಲಾಗಿದೆ.

Read All News