ಕರದಂಟು ನಗರಿ ಗೋಕಾಕನಲ್ಲಿ ಲಾಕಡೌನ್ ಗೆ ಉತ್ತಮ ರೆಸ್ಪಾನ್ಸ್

  • 15 Jan 2024 , 2:21 AM
  • Belagavi
  • 207

ಬೆಳಗಾವಿ: ಕರದಂಟು ನಗರಿ ಗೋಕಾಕ್ ಸಂಪೂರ್ಣ ಸ್ತಬ್ಧವಾಗಿದೆ. ಜಿಲ್ಲೆಯ ಐದು ತಾಲೂಕುಗಳಲ್ಲಿ ಲಾಕ್ ಡೌನ್ ಘೋಷಿಸಿದೆ ಅದಕ್ಕೆ ಗೋಕಾಕ ನಗರದಲ್ಲಿ ದಿನನಿತ್ಯ ಸಾವಿರಾರು ಜನ ಸಂಚರಿಸುತ್ತಿದ್ದ ರಸ್ತೆಗಳು ಇಂದು ಖುಲಂ ಕುಲ್ಲಾ ಆಗಿದೆ .ನಿತ್ಯ ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ರಸ್ತೆಗಳು ಬಿಕೋ ಬಿಕೋಸಾರಿಗೆ ಬಸ್‌ಗಳು, ಆಟೊರಿಕ್ಷಾಗಳು ರಸ್ತೆಗಿಳಿದಿಲ್ಲ . ಕೊರೋನಾ ಸೊಂಕು ಹರಡುವದನ್ನು ತಡೆಯಲು ವಾಹನ ಸಂಚಾರ, ಸಾರಿಗೆ ಸಂಪರ್ಕ, ಅಂಗಡಿ, ಮುಗ್ಗಟ್ಟುಗಳು ಸಂಪೂರ್ಣ ಬಂದ ಮಾಡಲಾಗಿದೆ ಕರದಂಟು ನಗರ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಆಗಿದ್ದು ನಗರದ ಎಲ್ಲ ರಸ್ತೆಗಳಲ್ಲಿ ಲಾಠಿ ಹಿಡಿದು ನಿಂತಿರುವ ಪೊಲೀಸರು ನಿಂತಿದ್ದಾರೆ ಅನುಮಾನ ವಾಗಿ ತಿರುಗುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಜಿಲ್ಲೆಯ ಗೋಕಾಕನಲ್ಲಿ ಲಾಕಡೌನ್ ಗೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದೆ.

Read All News