ಗುಜರಾತ್: ಅಫ್ಘಾನಿಸ್ತಾನದಿಂದ ಭಾರತಕ್ಕೆ ಕಂಟೇನರಗಳಲ್ಲಿ ಕಳ್ಳಸಾಗಣೆಯಿಂದ್ ಸಾಗಿಸುತಿದ್ದ ಭಾರಿ ಪ್ರಮಾಣದ ಹೆರಾಯಿನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್ ಐ) ಮುಂದ್ರಾ ಪೋರ್ಟನಿಂದ್ ವಶಪಡಿಸಿಕೊಂಡಿದೆ ಈ ಕಂಟೇನರಗಳನ್ನು 13.09.2021 ರಂದು ವಶಕ್ಕೆ ತೆಗೆದುಕೊಂಡಿತ್ತು ಎಂದು ತಿಳಿದು ಬಂದಿದೆ.
ಈ ಕಂಟೇನರ್‌ಗಳ ವಿವರವಾದ ಪರೀಕ್ಷೆಯು 17.09.2021 ಮತ್ತು 19.09.21 ರಂದು ನಡೆಸಲಾಗಿತ್ತು ಮತ್ತು ಎರಡು ಕಂಟೇನರ್‌ಗಳಿಂದ ಬರೋಬ್ಬರಿ 2988 ಕೆಜಿ ಹೆರಾಯಿನ್ ವಶಕ್ಕೆ ಪಡೆಯಲಾಗಿತ್ತು ಎಂದು ತಿಳಿಸಿದೆ.
ಹೆರಾಯಿನ್ ಅನ್ನು ಜಂಬೋ ಚೀಲಗಳಲ್ಲಿ ಮುಚ್ಚಿಡಲಾಗಿದ್ದು ಹೆರಾಯಿನನ್ನು ಚೀಲಗಳ ಕೆಳಗಿನ ಪದರಗಳಲ್ಲಿ ಇರಿಸಲಾಗಿತ್ತು . ಹೆರಾಯಿನ್ ಪತ್ತೆಹಚ್ಚುವುದನ್ನು ತಪ್ಪಿಸಲು ಟಾಲ್ಕ್ ಕಲ್ಲುಗಳಿಂದ ಮೇಲಕ್ಕೆತ್ತಲಾಗಿತ್ತು .
ಮುಂದಿನ ಕಾರ್ಯಾಚರಣೆಗಳನ್ನು ಹೊಸದಿಲ್ಲಿ, ನೋಯ್ಡಾ (ಯುಪಿ),ಚೆನ್ನೈ, ಕೊಯಮತ್ತೂರು, ಅಹಮದಾಬಾದ್, ಮಾಂಡ್ವಿ, ಗಾಂಧಿಧಾಮ್ ಮತ್ತು ವಿಜಯವಾಡದಲ್ಲಿ ನಡೆಸಲಾಯಿತು.
ದೆಹಲಿಯ ಗೋಡೌನ್ ನಿಂದ 16.1 ಕೆಜಿ ಹೆರಾಯಿನ್,10.2 ಕೆಜಿಯಷ್ಟು ಕೊಕೇನ್ ಎಂದು ಶಂಕಿಸಲಾಗಿರುವ ಪುಡಿ ಮತ್ತು ಹೆರಾಯಿನ್ ಎಂದು ಶಂಕಿಸಲಾದ 11 ಕೆಜಿ ವಸ್ತುವನ್ನು ನೋಯ್ಡಾದ ವಾಸಸ್ಥಳದಿಂದ ಪತ್ತೆ ಹಚ್ಚಲಾಗಿದೆ.
ಪ್ರಕರಣದಲ್ಲಿ ಈವರೆಗೆ ನಾಲ್ಕು ಅಫ್ಘಾನ್ ಪ್ರಜೆಗಳು, ಒಬ್ಬ ಉಜ್ಬೇಕ್ ರಾಷ್ಟ್ರೀಯ ಮತ್ತು ಮೂವರು ಭಾರತೀಯ ಪ್ರಜೆಗಳು ಸೇರಿದಂತೆ ಒಟ್ಟು ಎಂಟು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಬಂಧಿತ ಭಾರತೀಯ ಪ್ರಜೆಗಳು ಆಮದು ರಫ್ತು ಕೋಡ್ (IEC) ಹೊಂದಿರುವವರನ್ನು ಒಳಗೊಂಡಿದ್ದು, ಇದನ್ನು ಸರಕು ಆಮದು ಮಾಡಲು ಬಳಸಲಾಗುತ್ತಿತ್ತು. ಆತನನ್ನು ಚೆನ್ನೈನಿಂದ ಬಂಧಿಸಲಾಯಿತು ಮತ್ತು ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದೆ.