ಬೆಳಗಾವಿ: ಬೆಳಗಾವಿ ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕ ಹುದ್ದೆಯಲ್ಲಿ ಸದ್ಯಕ್ಕೆ 21 ಜನರು ಪರಿಶಿಷ್ಟ ಜಾತಿ ಹಾಗೂ 5 ಪರಿಶಿಷ್ಟ ಪಂಗಡದ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಕಳೆದ 15 ವರ್ಷಗಳಿಂದ ಅರಣ್ಯ ರಕ್ಷಕ ಹುದ್ದೆಯಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಇತ್ತೀಚಿಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಸರ್ಕಾರ ಆದೇಶದ ಪ್ರಕಾರ ಒಟ್ಟು 116 ಜನರನ್ನು ಅರಣ್ಯ ರಕ್ಷಕ ಹುದ್ದೆಯಿಂದ ಉಪವಲಯ ಅರಣ್ಯಾಧಿಕಾರಿ ಹುದ್ದೆಗೆ ಬಡ್ತಿ ನೀಡಿ ಆದೇಶ ಮಾಡಿದ್ದಾರೆ. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರನ್ನು ಅದರಲ್ಲಿ ಪರಿಗಣಿಸಿಲ್ಲ ಇದರಿಂದಾಗಿ 21 ಜನ ಪರಿಶಿಷ್ಟ ಜಾತಿ ಮತ್ತು 5 ಪರಿಶಿಷ್ಟ ಪಂಗಡದ ನೌಕರರಿಗೆ ಅನ್ಯಾಯ ಮಾಡಲಾಗಿದೆ ಈ ಕುರಿತು ಹಿರಿಯ ಅಧಿಕಾರಿಗಳು ಹಾಗೂ ಸರಕಾರ ಮಟ್ಟದಲ್ಲಿ ವಿಚಾರಿಸಿದ್ದಾಗ ಯಾವುದೇ ಸ್ಪಷ್ಟವಾದ ಕಾರಣ ನೀಡುತ್ತಿಲ್ಲ. ಅರಣ್ಯ ಇಲಾಖೆಯ ವಿವಿಧ ವೃಂದಗಳಲ್ಲಿ ಸೇವಾ ಹಿರಿತನ ನಿಗದಿಪಡಿಸುವಲ್ಲಿ ಹಾಗೂ ಪದೋನ್ನತಿ ನೀಡುವ ಸಂದರ್ಭದಲ್ಲಿ ಉಂಟಾಗಿರುವ ನ್ಯೂನತೆಗಳನ್ನು ಸರಿಪಡಿಸಲು ಸಮಿತಿ ರಚನೆ ಮಾಡಲಾಗಿತ್ತು ಈ ಸಮಿತಿಯಲ್ಲಿ ಸಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ನ್ಯಾಯ ಸಿಗಬೇಕು. ಇದರಿಂದ ಅನ್ಯಾಯವಾಗಿದೆ. ಹಾಗೆಯೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರ ಪ್ರತಿನಿಧಿ ಹಾಗೂ ಸಮಾಜ ಕಲ್ಯಾಣ್ ಇಲಾಖೆ ಪ್ರತಿನಿಧಿ ಇಲ್ಲದೆ ಸಮಿತಿ ರಚನೆ ಮಾಡಿದ್ದು ಸರಿಯಲ್ಲ ಇದು ದಲಿತರಿಗೆ ಅನ್ಯಾಯ ಮಾಡುವ ಉದ್ದೇಶ ಅಂತ ನಮಗೆ ಅನಸುತ್ತೆ. ಹಾಗೆಯೇ ರಾಜ್ಯದ 13 ವೃತ್ತದಲ್ಲಿನ ಸಾವಿರಾರು SC ಮತ್ತು ST ನೌಕರರಿಗೆ ಅನ್ಯಾಯ ಮಾಡಲಾಗಿದೆ ಈ ಕುರಿತು ಮುಖ್ಯಮಂತ್ರಿಗಳು ಅರಣ್ಯ ಸಚಿವರು ಗಮನ ಹರಿಸಿ ಅನ್ಯಾಯವಾದ ನೌಕರರಿಗೆ ನ್ಯಾಯ ಒದಗಿಸಿಕೊಡಲು ಮುಂದಾಗಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಹಾದೇವ ತಳವಾರ್, ಜಗದೀಶ ಸಾವಂತ, ಸುರೇಶ ತಳವಾರ, ಪ್ರಮೋದ್ ಹೊಸಮನಿ, ಮಹೇಶ ಹಟ್ಟಿಹೊಳಿ ಸೇರಿದಂತೆ ಇತರ ದಲಿತ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.