ಬೆಳಗಾವಿ ‌ಜಿಲ್ಲೆಗೆ 30 ಕೋಟಿ‌ ಬೆಳೆ ಪರಿಹಾರ: ಸಚಿವ ಬಿ.ಸಿ.ಪಾಟೀಲ

  • 17 Dec 2023 , 9:59 PM
  • Belagavi
  • 154

ಚಿಕ್ಕೋಡಿ :ಬೆಳಗಾವಿ ಜಿಲ್ಲೆಗೆ ಇದುವರೆಗೆ 30 ಕೋಟಿ ಬೆಳೆ ಹಾನಿ ಪರಿಹಾರ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದರು. ಮಂಗಳವಾರ ಚಿಕ್ಕೋಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ರೈತರೊಂದಿಗೆ ಒಂದು ದಿನದ ಕಾರ್ಯಕ್ರಮ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಮಾಲಾಗುತ್ತಿದೆ.ಕಾರ್ಯಕ್ರಮದ ಉದ್ದೇಶ ಸರ್ಕಾರವನ್ನ ರೈತರ ಮನೆ ಬಾಗಿಲಿಗೆ ಒಯ್ಯುವ ಉದ್ದೇಶವಾಗಿದೆ ಎಂದರು.

ಪ್ರಗತಿಪರ ರೈತರನ್ನ ಗುರ್ತಿಸಿ ಇನ್ನುಳಿದ ರೈತರಗೆ ಪ್ರೇರಣೆ ನೀಡುವ ಉದ್ದೇಶ ಆಗಿದೆ. ರೈತರೊಂದಿಗೆ ಸಂವಾದ ನಡೆಸಿ ಸರ್ಕಾರದ ಸೌಲಭ್ಯಗಳ ಕುರಿತು ರೈತರಿಗೆ ತಿಳಿ ಹೇಳುವುದು ಕಾರ್ಯಕ್ರಮದ ಪ್ರಮುಖ ಉದ್ದೇಶ ಸೋಯಾಬಿನ ಎಂ.ಎಸ್.ಪಿ ಹೆಚ್ಚಿಸಲು ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡುತ್ತೇವೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ ಎಂ.ಎಸ್.ಪಿ ಹೆಚ್ವಿಸಲು ಮನವಿ ಮಾಡುತ್ತೇವೆ ಎಂದರು‌. ಬೆಳಗಾವಿ ಜಿಲ್ಲೆಗೆ ಇದುವರೆಗೆ 30 ಕೋಟಿ ಬೆಳೆ ಹಾಣಿ ಪರಿಹಾರ ಬಂದಿದೆ.

ಇನ್ನುಳಿದ ರೈತರ ಖಾತೆಗು ನೇರವಾಗಿ ಹಣ ಜಮಾವಣೆ ಆಗಲಿದೆ. ರಾಜ್ಯದಲ್ಲಿ ರಸಗೊಬ್ಬರದ ಯಾವುದೇ ಕೊರತೆ ಇಲ್ಲ ಎಂದರು.

Read All News