ಅಥಣಿ :ಕೋವಿಡ್ ಸಂದರ್ಭದಲ್ಲಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ಅವಶ್ಯಕವಾಗಿ ಅಂಬುಲೆನ್ಸ್ ಬೇಕು ಎಂಬ ಮನವಿ ಹಿನ್ನಲೆಯಲ್ಲಿ ಇವತ್ತು ಹೈಟೆಕ್ ಅಂಬುಲೆನ್ಸ್ ವಿತರಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಮಹೇಶ ಕುಮಠಳ್ಳಿ ಅವರು ಹೇಳಿದರು.
ಅವರು ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ಹೈಟೆಕ್ ಅಂಬುಲೆನ್ಸ್ ಕೊಟ್ಟು ಉದ್ಘಾಟಿಸಿ ಮಾತನಾಡಿದ ಅವರು ಶೀಘ್ರದಲ್ಲಿ ತಾಲೂಕಿನ ಐಗಳಿ, ಸತ್ತಿ ಗ್ರಾಮದ ಆಸ್ಪತ್ರೆಗೂ ಕೂಡ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ಇತ್ತೀಚಿಗೆ ಸರಕಾರಿ ಆಸ್ಪತ್ರೆಗಳೂ ಕೂಡ ಯಾವುದೇ ಕೊರತೆ ಇಲ್ಲದೆ ಉತ್ತಮವಾದ ಸೇವೆಯನ್ನು ಒದಗಿಸುತ್ತಿವೆ ಎಂದರು.
ಈ ವೇಳೆ ಅನೀಲ ಸೌದಾಗರ, ತಾಲೂಕಾ ವೈದ್ಯಾಧಿಕಾರಿ ಬಸಗೌಡ ಕಾಗೆ, ಸಿ ಎಚ್ ಪಾಟೀಲ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.