ರೆಡ್ಡಿ ಸಮುದಾಯ ಭವನ‌ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಕುಮಠಳ್ಳಿ

  • 14 Jan 2024 , 10:30 PM
  • Belagavi
  • 124

ಅಥಣಿ : ರೆಡ್ಡಿ ಸಮಾಜದ ಸಮುದಾಯ ಭವನ ನಿರ್ಮಾಣಗೊಳ್ಳುತ್ತಿರುವುದು ಸಂತೋಷದ ವಿಷಯ, ಈ ಸಮುದಾಯ ಭವನ ನಿರ್ಮಾಣಕ್ಕಾಗಿ ಸುಮಾರು 50 ಲಕ್ಷ ರೂ ಅನುದಾನ ಬಿಡುಗಡೆಯಾಗಿದ್ದು ಈ ಅನುದಾನ ಬಿಡುಗಡೆಗೆ ನನ್ನ ಜೊತೆ ಲಕ್ಣ್ಮಣ ಸವದಿ ಅವರೂ ಸಹ ಕೈಜೋಡಿಸಿದ್ದಾರೆ.

ಇನ್ನು ಮುಂಬರುವ ದಿನಮಾನಗಳಲ್ಲಿ ಮತ್ತಷ್ಟು ಅನುದಾನವನ್ನು ತರುವ ಪ್ರಯತ್ನ‌ ಮಾಡುತ್ತೇವೆ ಎಂದು ಶಾಸಕ ಮಹೇಶ ಕುಮಠಳ್ಳಿ ಅವರು ಹೇಳಿದರು. ಅವರು ಪಟ್ಟಣದ ಚಿಕ್ಕಟ್ಟಿ ರಸ್ತೆಗೆ ಹೊಂದಿಕೊಂಡ ಕೆಇಬಿ ಎದುರಿನ ರೆಡ್ಡಿ ಸಮಾಜದ ಸಮುದಾಯ ಭವನದ ಭೂಮಿಪೂಜಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಯುವ ಮುಖಂಡ ಚಿದಾನಂದ ಸವದಿ ಅವರು ಮಾತನಾಡುತ್ತಾ ಮಾನ್ಯ ಶಾಸಕರಾದ ಮಹೇಶ ಕುಮಠಳ್ಳಿ ಅವರು ತಲಾ 50 ಲಕ್ಷ ರೂ ನಂತರ ಮೂರು ಸಮುದಾಯ ಭವನ ನಿರ್ಮಾಣಕ್ಕೆ ಇವತ್ತು ಚಾಲನೆ ನೀಡಿರುವುದು ಹೆಮ್ಮೆಯ ವಿಷಯವಾಗಿದೆ ಹಾಗೂ ಮುಂದೆ ಲಕ್ಷ್ಮಣ ಸವದಿ ಅವರ ವಿಧಾನಪರಿಷತ್ ಅನುದಾನದಡಿಯಲ್ಲಿ ಸಹ 25 ಲಕ್ಷ ರೂ ಮತ್ತಷ್ಟು ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ರೆಡ್ಡಿ ಸಮುದಾಯದ ಮುಖಂಡ ಎನ್ ಆರ್ ಕೋಖಲೆ ಅವರು ಮಾತನಾಡುತ್ತಾ ಶಾಸಕ ಮಹೇಶ ಕುಮಠಳ್ಳಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಪ್ರಯತ್ನದಿಂದ ಸುಮಾರು 50 ಲಕ್ಷ ರೂ ಅನುದಾನ ಮಂಜೂರಾಗಿದೆ ಅದರ ಜೊತೆಗೆ ಸಮಾಜದವರು ಸೇರಿ ಮತ್ತಷ್ಟು ಹಣ ಸೇರಿಸಿ ಮಾದರಿ ಸಮುದಾಯ ಭವನ ನಿರ್ಮಾಣ ಮಾಡಲಿದ್ದೆವೆ ಎಂದು ತಿಳಿಸಿದರು.ಸಮಾರಂಭದ ದಿವ್ಯಸಾನಿಧ್ಯ ವಹಿಸಿದ್ದ ಶೆಟ್ಟರಮಠದ ಮರುಳಸಿದ್ದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಈ ವೇಳೆ ಸಮಾರಂಭದಲ್ಲಿ ಅಣ್ಣಪ್ಪಗೌಡ ಪಾಟೀಲ, ಅಪ್ಪಾಸಾಬ ಆಲಬಾಳ, ವಾಯ್ ಜಿ ಖೋತ್, ಅಧ್ಯಕ್ಷ ಡಾ ಸಿ ಎ ಸಂಕ್ರಟ್ಟಿ, ಶಿವಾನಂದ ದೇವರಡ್ಡಿ, ಸುರೇಶ ಮಾಚಕನೂರ, ಎ ಎಸ್ ಹುಚಗೌಡರ್, ರಮೇಶ ಪಾಟೀಲ, ಪರಮೇಶ ಮುಳ್ಳೂರ, ಗೌಡಪ್ಪಾ ಖೋತ್, ಶ್ರೀಶೈಲ ನಾಯಿಕ, ಪಿ ಎಸ್ ಕುಳ್ಳೋಳ್ಳಿ, ಶಿವಾನಂದ ಸಂಕ್ರಟ್ಟಿ, ಶಿವಾನಂದ ಮಾಲಗಾಂವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read All News