ಬೆಳಗಾವಿ :ಜಿಲ್ಲೆಯ ಕೆಲವೆಡೆಗಳಲ್ಲಿ ಮಳೆಯ ರೌದ್ರಾವತಾರದಿಂದ ಅವಾಂತರ ಸೃಷ್ಟಿಯಾಗಿದ್ದು ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿಯಲ್ಲಿ ಮಳೆಯ ನರ್ತನಕ್ಕೆ ಮನೆ ಕುಸಿದು ಒಂದೇ ಕುಟುಂಬದ ಐವರು ಹಾಗೂ ಪಕ್ಕದ ಮನೆಯ ಇಬ್ಬರು ಒಟ್ಟು ಏಳು ಜನರು ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಕೊರೊನಾ, ಪ್ರವಾಹದಿಂದ ತತ್ತರಿಸಿದ್ದ ಜಿಲ್ಲೆಯ ಜನರು ಈಗ ಅಕಾಲಿಕ ಮಳೆಯಿಂದ ಬಡಾಲ ಅಂಕಲಗಿಯ ಒಂದೇ ಕುಟುಂಬದವರು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.