ಕುಂದಾನಗರಿಯಲ್ಲಿ ಮುಂದುವರಿದಿದೆ ಕೋರೊನಾ ಕ್ರೌರ್ಯ

  • 15 Jan 2024 , 2:00 AM
  • Belagavi
  • 130

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ದಿನದಿಂದ ದಿನಕ್ಕೆ ಕೋರೊನಾ ತನ್ನ ಕ್ರೌರ್ಯ ಪ್ರದರ್ಶಿಸಿಸುತ್ತಿದೆ. ಇಂದು ಮತ್ತೆ ಒಂದೇ ದಿನ 87 ಕೋರೊನಾ ಪ್ರಕರಣಗಳು ಪತ್ತೆಯಾಗುವ ಮೂಲಕ ಮತ್ತೆ ಈ ಗಡಿನಾಡ ಜನರನ್ನು ಬೆಚ್ಚಿ ಬಿಳಿಸಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಸಾವಿರ ಗಡಿದಾಟಿ 1013ಕ್ಕೆ ಏರಿಕೆ ಆಗಿದ್ದು. ಒಟ್ಟು 435 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ನಿಂದ ಇಂದು ಇಬ್ಬರು ಜನರು ಬಲಿಯಾಗಿದ್ದು ಸೇರಿ ಒಟ್ಟು 26 ಜನರು ಬಲಿಯಾಗಿದ್ದಾರೆ. ಸೋಂಕಿತರಿಗೆ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೋರೊನಾದಿಂದ ಕುಂದಾನಗರಿ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

Read All News