ಬೆಳಗಾವಿ: ರಾಜ್ಯಸಭೆಗೆ ಆಯ್ಕೆಯಾಗಿರುವ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕಲ್ಲೊಳ್ಳಿ ಗ್ರಾಮದ ಅಪ್ಪಟ ಗ್ರಾಮೀಣ ಹಿನ್ನೆಲೆಯುಳ್ಳ ಈರಣ್ಣಕಡಾಡಿ ಅವರು ಇಂದು ದಿಲ್ಲಿಯ ಸಂಸತ್ ಭವನದಲ್ಲಿ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜನ ಸಾಮಾನ್ಯರೊಂದಿಗೆ ಬೆರೆತು ಕೆಲಸ ಮಾಡುವ ಕಡಾಡಿ ಅವರು ಕನ್ನಡದಲ್ಲಿಯೇ ಪ್ರಮಾಣವಚನಸ್ವೀಕರಿಸಿದ್ದು ನಾಡಿನ,ವಿಶೇಷವಾಗಿ ಗಡಿ ಜಿಲ್ಲೆ ಬೆಳಗಾವಿಯಕನ್ನಡಿಗರಿಗೆಹರ್ಷವನ್ನುಂಟು ಮಾಡಿದೆ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕಚಂದರಗಿಬೆಳಗಾವಿಜಿಲ್ಲಾಕನ್ನಡಸಂಘಟನೆಗಳಕ್ರಿಯಾಸಮಿತಿಯಿಂದಅಭಿನಂದನೆಸಲ್ಲಿಸಿದ್ದಾರೆ.