ಸಮಾಜಕ್ಕೆ ಮಾದರಿಯಾದ ಎಪಿಎಂಸಿ ಸದಸ್ಯ ಪರಮೇಶ
- 13 Jan 2024 , 1:42 PM
- Haveri
- 144
<strong>ಹಾವೇರಿ</strong>: ಎಪಿಎಂಸಿ ಸದಸ್ಯನೊಬ್ಬ ತನ್ನ ಜನ್ಮ ದಿನವನ್ನು ಅದ್ಧೂರಿಯಾಗಿ ಆಚರಿಸುವ ಬದಲು ಅದೇ ಹಣದಲ್ಲಿ ರಸ್ತೆ ಕಾಮಗಾರಿ ಮಾಡುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ. ಹೌದು... ಹಾವೇರಿ ಜಿಲ್ಲೆಯ ರಾಣೇಬೆನ್ನೂರ ಪಟ್ಟಣದ ಎಪಿಎಂಸಿ ಸದಸ್ಯ ಪರಮೇಶ ಗೂಳಣ್ಣನವರ ತಮ್ಮಜನ್ಮದಿನದ ನಿಮಿತ್ಯ ರಸ್ತೆ ಕಾಮಗಾರಿ ಮಾಡುತ್ತಿದ್ದಾರೆ. ಈತನ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ರೀತಿ ಸರ್ಕಾರದ ಜೊತೆ ಅಭಿವೃದ್ಧಿ ಕಾರ್ಯಗಳಿಗೆ ಜನರು ಕೈಜೋಡಿಸಿದರೇ ದೇಶ ಅಭಿವೃದ್ದಿ ಹೊಂದಲು ಸಾಧ್ಯ ಎಂದು ಶಾಸಕ ಅರುಣಕುಮಾರ ಪೂಜಾರ ಎಪಿಎಂಸಿ ಸದಸ್ಯ ಪರಮೇಶ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹುಟ್ಟು ಹಬ್ಬದ ಪ್ರಯುಕ್ತ ನಗರದಿಂದ ಬೆನಕನಕೊಂಡಕ್ಕೆ ತೆರಳುವ ಹಳೆಯ ರಸ್ತೆಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಅರುಣಕುಮಾರ ಇಂತಹ ಸಮಾಜ ಮುಖಿ ಕಾರ್ಯಗಳು ಸದಾ ಮುಂದುವರೆಯಲಿ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪರಮೇಶ ಗೂಳಣ್ಣನವರ ಸುಮಾರು ಎರಡು ಕಿಮೀ ವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಬೃಹತಕಾರವಾಗಿ ಬೆಳೆದು ನಿಂತಿರುವ ಗಿಡಗಂಟಿಗಳನ್ನು ತೆಗೆದುಹಾಕಿ ಸಮತಟ್ಟು ಮಾಡುವ ಗುರಿ ಇಟ್ಟು ಕೊಂಡಿದ್ದೇನೆ, ಮುಂಬರುವ ದಿನಗಳಲ್ಲಿ ಸ್ಥಳೀಯ ಶಾಸಕ ಹಾಗೂ ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅನುದಾನದ ನೆರವಿನಿಂದ ರಸ್ತೆಯನ್ನು ಪೂರ್ಣಗೊಳಿಸುವ ಇಚ್ಛೆಯಿದೆ ಹೊಂದಿದ್ದೇನೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ಮಾಜಿ ಸದಸ್ಯ ಸಿ.ಸಿ.ಪಾಟೀಲ, ಶಿವಕುಮಾರ ಮುದ್ದಪ್ಪಳವರ, ನಗರಸಭಾ ಸದಸ್ಯರುಗಳಾದ ಪ್ರಕಾಶ ಪೂಜಾರ, ನಾಗರಾಜ ಅಡ್ಮನಿ, ಪ್ರಕಾಶ ಬುರಡಿಕಟ್ಟಿ, ಎಪಿಎಂಸಿ ಸದಸ್ಯ ರಮೇಶ ನಾಯ್ಕ್, ವಿಶ್ವನಾಥ ಪಾಟೀಲ, ರಾಯಣ್ಣ ಮಾಕನೂರ, ಮೃತ್ಯುಂಜಯ ಕಾಕೋಳ, ಚನ್ನಬಸಪ್ಪ ತೋಟಪ್ಪನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.