ಬೆಳಗಾವಿ: ಕೊರೋನಾವಾರಿಯಸ್ ಶುಶೂಷಾಧಿಕಾರಿಗಳ ಗುತ್ತಿಗೆ ನೌಕರರ ಸೇವೆಯನ್ನು ಮುಂದುವರೆಸುವಂತೆ ಆಗ್ರಹಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕೊರೋನಾವಾರಿಯಸ್ ಸಿಬ್ಬಂದಿ ವರ್ಗದವರು ದೇಶದಾಂತ್ಯ ಕೋರೋನಾ-19 ಸಾಂಕ್ರಾಮಿಕ ರೋಗ ವ್ಯಾಪಿಸಿದ ಹೆನ್ನಲೆಯಲ್ಲಿ ಘನ ಕರ್ನಾಟಕ ಸರ್ಕಾರವು ಕೋರೋನಾ ನಿಯಂತ್ರಣ ಹಾಗೂ ನಿರ್ವಹಣೆಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರಕಾರ ತಾತ್ಕಾಲಿಕವಾಗಿ 3 ಮತ್ತು 6 ತಿಂಗಳ ಅವಧಿಗೆ ಶುಕ್ರೂಷಾಧಿಕಾರಿಗಳ ಗುತ್ತಿಗೆ ಆಧಾರದ ಮೇಲೆ ಸರಕಾರದ ಆದೇಶದಂತೆ ತಾತ್ಕಾಲಿಕವಾಗಿ ನೇಮಿಸಿಕೊಂಡಿತ್ತು.
ನಾವು ಕೋರೋನಾ ಎರಡನೇ ಅಲೆಯಲ್ಲಿ ತಾಲೂಕಾ ಸಾರ್ವಜನಿಕ ಆಸ್ಪತ್ರೆ, ಖಾನಾಪೂರದಲ್ಲಿ ಸೇವೆ ನಿರ್ವಹಿಸಿದ್ದೇವೆ. ಎಲ್ಲಾ ಸಿಬ್ಬಂದಿ ವರ್ಗದವರು ಕೋರೋನಾದಂತಹ ವಿಷಯ ಹಾಗೂ ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ತಮ್ಮ ಮನೆ ತಂದೆ, ತಾಯಿ, ಗಂಡ,ಮಕ್ಕಳು ಮತ್ತು ಸಂಬಂಧಿಗಳನ್ನು ಲೆಕ್ಕಿಸದೆ ನಮ್ಮ ಜೀವದ ಹಂಗನ್ನು ತೊರೆದು ರೋಗಿಗಳಿಗೊಸ್ಕರ ಕರ್ತವ್ಯ ನಿರ್ವಹಿಸುತ್ತಿದ್ದೇವೆ.
ಜಿಲ್ಲಾ ಅಧಿಕಾರಿಗಳಾದ ತಾವು ಮರು ಉತ್ತರಿಸಿದ ಪ್ರಕಾರ ಮಹಿಳೆಯರಿಗೆ ಎನ್.ಎಚ್.ಎಮ್ ಮತ್ತು ಪುರುಷರಿಗೆ ಎನ್.ಸಿ.ಡಿ. ಗೆ ಪ್ರಥಮ ಆದ್ಯತೆ ಕೊಡಬೇಕಾಗಿ ಮಣಿಸಿಕೊಳ್ಳುತ್ತೇವೆ.
ಈ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರವು ಈ ಮೇಲಿನ ಎಲ್ಲಾ ಗುತ್ತಿಗೆ ನೌಕರರ ಕಾರ್ಯದಕ್ಷತೆ ಸೇವೆಯನ್ನು ಪರಿಗಣಿಸಿ ನಮ್ಮೆಲ್ಲರ ಕಾರ್ಯವನ್ನು ಮುಂದುವರೆಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಂಡಿದ್ದಾರೆ.