ಬೆಳಗಾವಿ: ದಿನದಿಂದ ದಿನಕ್ಕೆ ಹರಡುತ್ತಿರುವ ಕಿಲ್ಲರ್ ಕೋರೊನಾದ ಬಗ್ಗೆ ಕ್ಷೇತ್ರದ ಜನರು ಯಾರೂ ಭಯಭೀತರಾಗಬಾರದು ಧೈರ್ಯವಾಗಿರ ಬೇಕು ಅಷ್ಟೇ ಅಲ್ಲದೆ ಮಾನಸಿಕವಾಗಿ ಗಟ್ಟಿಯಾಗಿರ ಬೇಕೆಂದು ಹೆಬ್ಬಾಳ ಜಿಲ್ಲಾ ಪಂಚಾಯತ ಸದಸ್ಯ ಮಹಾಂತೇಶ ಮಗದುಮ ಕ್ಷೇತ್ರದ ಜನರಿಗೆ ಕಿವಿಮಾತು ಹೇಳಿದ್ದಾರೆ. ಸರಕಾರ ಹೇಳಿದ ಮುಂಜಾಗ್ರತಾ ಕ್ರಮಗಳನ್ನು ಅನುಕರಣೆಯಿಂದ ಮಾತ್ರ ನಾವು ಕೊರೋನ ಗೆಲ್ಲಬಹುದಾಗಿದೆ. ಇಲ್ಲಿ ಕೊರೋನ ಉಪದ್ರವ ಕೇಂದ್ರ ಪ್ರಾರಂಭವಾಗಿದೆ. ಕ್ಷೇತ್ರದ ಜನರು ಆತ್ಮ ಸ್ಥೈರ್ಯವನ್ನು ಕಳೆದುಕೊಳ್ಳಬಾರದು ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೋರೊನಾ ವಾರಿಯರ್ಸ್‌ಗಳಿಗೆ ಜನರು ಬೆಂಬಲ ನೀಡುವುದರ ಜೊತೆಗೆ ಜನರಲ್ಲಿ ಕೋರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿರುವ ಜಿಪಂಸದಸ್ಯಮಹಾಂತೇಶಮಗದುಮ್ಮ ಅವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.