ದೆಹಲಿ: ಕೇಂದ್ರ ಸರ್ಕಾರ ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿತ್ತು, ನಂತರ ರಾಜ್ಯ ಸರ್ಕಾರಗಳು ತಮ್ಮ ಮಟ್ಟದಲ್ಲಿ ವ್ಯಾಟ್ ಬೆಲೆಗಳನ್ನು ಕಡಿಮೆ ಮಾಡುವ ಮೂಲಕ ಸಾರ್ವಜನಿಕರಿಗೆ ಪರಿಹಾರ ನೀಡಬೇಕೆಂದು ಒತ್ತಡ ಹೇರಲಾಗಿತ್ತು.
ರಾಜಧಾನಿಯ ಜನತೆಗೆ ಬಿಗ್ ರಿಲೀಫ್ ನೀಡಿದ ದೆಹಲಿ ಸರ್ಕಾರ ಪೆಟ್ರೋಲ್ ಬೆಲೆಯನ್ನು ರೂ.8 ರಷ್ಟು ಇಂದು ನಡೆದ ಸಂಪುಟ ಸಭೆಯ ಬಳಿಕ ದೆಹಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಇಂದು ನಾವು ದೆಹಲಿಯಲ್ಲಿ ಪೆಟ್ರೋಲ್ ಅನ್ನು ಅತ್ಯಂತ ಅಗ್ಗವಾಗಿಸಿದ್ದೇವೆ ವ್ಯಾಟ್ ದರವನ್ನು 30% ರಿಂದ 19.4% ಕ್ಕೆ ಇಳಿಸಲಾಗಿದೆ. ಎನ್‌ಸಿಆರ್‌ನ ಇತರ ನಗರಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಗ್ಗವಾಗಿದೆ.
ಈ ಕ್ರಮವು ಹಣದುಬ್ಬರದಿಂದ ದೆಹಲಿಯ ಜನರಿಗೆ ಪರಿಹಾರವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಕೇಜ್ರಿವಾಲ್ ಟ್ವಿಟ್ ಮೂಲಕ ತಿಳಿಸಿದ್ದಾರೆ.
दिल्ली में आज हमने पेट्रोल काफ़ी सस्ता कर दिया। VAT की दर 30% से घटाकर 19.4% कर दी। NCR के अन्य शहरों के मुक़ाबले दिल्ली में पेट्रोल और डीज़ल सस्ता हो गया।
— Arvind Kejriwal (@ArvindKejriwal) December 1, 2021
मैं उम्मीद करता हूँ कि इस कदम से दिल्ली के लोगों को महंगाई से राहत मिलेगी।