ರಮೇಶಗೆ ಟಾಂಗ್ ಕೊಟ್ಟ್ ಹ್ಯಾರಿಶ್

  • 15 Jan 2024 , 12:11 AM
  • Belagavi
  • 92

ಬೆಳಗಾವಿ:ಬೇರೆ ಕಡೆಯಿಂದ ಗೂಂಡಾಗಳು ಬೆಳಗಾವಿಗೆ ಬಂದಿದ್ದರೇ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಶ್ ಪ್ರಶ್ನಿಸಿದರು.

ಶುಕ್ರವಾರ ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಮಾಜಿ ಸಚಿವ ರಮೇಶ ಜಾರಕಿಹೊಳಿ ಬೆಂಗಳೂರಿನಿಂದ ಗೂಂಡಾಗಳು ಬಂದು ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಯಿಸಿದ ಅವರು, ಬೇರೆ ಕಡೆಯಿಂದ ಬೆಳಗಾವಿಗೆ ಗೂಂಡಾಗಳು ಬಂದಿದ್ದರೇ ಇಲ್ಲಿನ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಕಳೆದ ಮೂರ್ನಾಲ್ಕು ದಿನದಿಂದ ಬೆಳಗಾವಿ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ‌ನಿಂದ ವೀಕ್ಷಕನಾಗಿ ಬಂದಿದ್ದೇನೆ. ಕಾಂಗ್ರೆಸ್ ಮನವಿಗೆ ಸ್ಪಂದಿಸಿರುವ ಜಿಲ್ಲಾ ಚುನಾವಣಾ ಅಧಿಕಾರಿಗಳು ಎಲ್ಲ ಮತಗಟ್ಟೆಯಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಿ ಚುನಾವಣೆಯ ಅಕ್ರಮವನ್ನು ತಡೆಯಲು ಸಹಕರಿಸಿರುವುದು ಎಲ್ಲ ಕಾಂಗ್ರೆಸ್ ಮುಖಂಡರು ಸ್ವಾಗತಿಸಿದ್ದಾರೆ ಎಂದರು.

ಬೆಳಗಾವಿ ವಿಧಾನ ಪರಿಷತ್ ‌ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಯಾವುದೇ ತೊಂದರೆ ಇಲ್ಲ. ಇರುವುದು ಬಿಜೆಪಿಗೆ ಇಬ್ಬರು ಅಭ್ಯರ್ಥಿ ಇರುವುದರಿಂದ ಮತದಾರರಿಗೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.

Read All News