ಉದ್ಯಮಬಾಗ್ ಪೊಲೀಸರ ಕಾರ್ಯ ಶ್ಲಾಘನಿಯ
- 15 Jan 2024 , 12:27 AM
- Belagavi
- 142
ಬೆಳಗಾವಿ: ರಾಜ್ಯದ ಕೋರೊನಾ ಸೋಂಕಿತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬೆಳಗಾವಿಯಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಹಗಲಿರುಳು ಕೊರೋನಾ ವಿರುದ್ಧದ ಹೋರಾಟದಲ್ಲಿ ಶ್ರಮಿಸುತ್ತಿರುವ ಬೆಳಗಾವಿ ನಗರದ ಉದ್ಯಮಬಾಗ ಪೊಲೀಸರ ಕೆಲಸ ಶ್ಲಾಘನೀಯವಾಗಿದೆ ಎಂದು ಇಲ್ಲಿಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಕಮೀಟಿಯವರು ಉದ್ಯಮಭಾಗ ಪೊಲೀಸರಿಗೆ ಪುಷ್ಪವೃಷ್ಠಿಗೈದು ಅವರಿಗೆ ಸನ್ಮಾನ ಮಾಡಿ ಗೌರವ ಸಲ್ಲಿಸಿದರು. ಜಗತ್ತೇ ಸಂಕಷ್ಟ ಪರಿಸ್ಥಿತಿಯಲ್ಲಿದ್ದು, ಕೋವಿಡ್-19 ವಿರುದ್ಧ ನೇರವಾಗಿ ಹೋರಾಡುತ್ತಿರುವ ಕೋವಿಡ್ ವಾರಿಯರ್ಸ್‍ಗಳಾಗಿರುವ ವೈದ್ಯರು, ದಾದಿಯರು, ಪೊಲೀಸರು, ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ ಸೇವಾಕರ್ತರು, ಪೌರಕಾರ್ಮಿಕರ ಕಾರ್ಯಕ್ಕೆ ಅದೆಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ. ಅದರಂತೆ ಬೆಳಗಾವಿಯ ಉದ್ಯಮಬಾಗ್ ಪೊಲೀಸರು ಈ ಭಾಗದಲ್ಲಿ ಕೊರೊನಾ ಹಾವಳಿ ಆರಂಭ ಆದ ದಿನದಿಂದಲೂ ಕೂಡ ಸಾಕಷ್ಟು ಶ್ರಮಿಸಿದ್ದಾರೆ ಎಂದು ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಕಮೀಟಿಯವರು ಶ್ಲಾಘಿಸಿ ಚಪ್ಪಾಳೆ, ಪುಷ್ಪರ್ಚನೆ ಮಾಡುವ ಮೂಲಕ ಸತ್ಕಾರ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ದಯಾನಂದ ಯಾವುದೇ ಕೆಲಸ ಯಶಸ್ವಿ ಆಗಬೇಕಾದರೆ ಜನರ ಸಹಕಾರ ಬಹುಮುಖ್ಯವಾಗಿದೆ, ಆದ್ದರಿಂದ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಮತ್ತು ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಿಎಸಐ ಮಂಜುನಾಥ ಭಜಂತ್ರಿ, ಪೋಲಿಸ್ ಸಿಬ್ಬಂದಿಗಳು, ದೇವಸ್ಥಾನ ಕಮೀಟಿ ಪದಾಧಿಕಾರಿಗಳಾದ ರಾಧಿಕಾ ಮಿರ್ಜಿ, ಲಕ್ಷ್ಮೀ ನೀಲಜಿ, ಶೀಲಾ ದೇಶಪಾಂಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.