ಬೆಳಗಾವಿ: ಕನ್ನಡಪರ ಸಂಘಟನೆಯ ಕಾರ್ಯಕರ್ತರಿದಂದ ಎಂ ಇ ಎಸ್ ಮುಂಖಂಡನ ಮೇಲೆ ಮಸಿ ಬಳೆದು ತಕ್ಕ ಶಾಸ್ತಿ ಮಾಡಿ ಪುಂಡ ಎಂಇಎಸ್ ಗೆ ಪಾಠ ಕಲಿಸಿದ್ದಾರೆ. ಕಪ್ಪು ಮಸಿ ಬಳಿದು ಮಹಾ ಮೇಳಾವ್ ಆಯೋಜಿಸಿದ್ದ ಎಂ ಇ ಎಸ್ ಗೆ ಶಾಕ್ ನೀಡಿದ ಕನ್ನಡಸಂಘನೆಯ ಕಾರ್ಯಕರ್ತರು.
ಕನ್ನಡಪರ ಸಂಘಟನೆ ಕಾರ್ಯಕರ್ತರಿಂದ ಎಂ ಇ ಎಸ್ ಮುಖಂಡ ದೀಪಕ್ ದಳವಿಗೆ ಕಪ್ಪು ಮಸಿ ಬಳೆದು ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ನಗರದ ವ್ಯಾಕ್ಸಿನ್ ಡಿಪೋ ಬಳಿ ಕಪ್ಪು ಮಸಿ ಬಳಿದ ಕರವೇ ಕಾರ್ಯಕರ್ತರು, ನಡು ಬೀದಿಯಲ್ಲಿ ಮಹಾಮೇಳಾವ್ ಗೆ ಸಿದ್ದತೆ ನಡೆಸಿದ್ದ ಎಂ ಇ ಎಸ್ ಕಾರ್ಯಕರ್ತರೆ ಮುಖ ಭಂಗ ಮಾಡಿದರು.
ಎಂ ಇ ಎಸ್ ಮುಖಂಡ ದೀಪಕ ದಳವಿಗೆ ಮಸಿ ಬಳಿದು ಮೇಳಾವ್ ಖಂಡಿಸಿದ ಕನ್ನಡಪರ ಸಂಘಟನೆ ಕಾರ್ಯಕರ್ತರು, ಕೂಡಲೇ ಕನ್ನಡಪರ ಸಂಘಟನೆಯ ಕಾರ್ಯಕರ್ತರನ್ನು ವಶಕ್ಕೆ ಪಡೆದ ಬೆಳಗಾವಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.