ಹಾವೇರಿ: ಜಿಲ್ಯಾದ್ಯಂತ ಇಬ್ಬರು ಖಾಸಗಿ ವೈದ್ಯರು, ಕಾಲೇಜು ಅಧ್ಯಾಪಕ, ಲ್ಯಾಬ್ ಟೆಕ್ನಿಷಿಯನ್, ಇಲೆಕ್ಟ್ರಿಷಿಯನ್ ಸೇರಿದಂತೆ ಜಿಲ್ಲೆಯಲ್ಲಿ ರವಿವಾರ 48 ಜನರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಆರು ಜನರು ಗುಣಮುಖ ರಾಗಿ ಬಿಡುಗಡೆ ಹೊಂದಿದ್ದರೆ ಓರ್ವ ಮೃತ ಪಟ್ಟಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 760 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ. ಇಂದಿನವರೆಗೆ 458 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ 24 ಜನರು ಮೃತಪಟ್ಟಿದ್ದಾರೆ. 278 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ. ಜುಲೈ 26 ರಂದು ಹಾವೇರಿ -11, ರಾಣೇಬೆನ್ನೂರು ಹಾಗೂ ಶಿಗ್ಗಾಂವ ತಾಲೂಕಿನಲ್ಲಿ ತಲಾ 10, ಸವಣೂರು-07, ಹಾನಗಲ್-06, ಬ್ಯಾಡಗಿ-03 ಹಾಗೂ ಹಿರೇಕೆರೂರು ತಾಲೂಕಿನಲ್ಲಿ ಒಂದು ಪ್ರಕರಣ ಪತ್ತೆಯಾಗಿವೆ.
ಪಾಸಿಟಿವ್ಪ್ರಕರಣಗಳವಿವರಗಳು: ಪಿ-68849ರ ಪ್ರಾಥಮಿಕ ಸಂಪರ್ಕದ ಹಾವೇರಿ ತಾಲೂಕು ಕನವಳ್ಳಿ ಗ್ರಾಮದ 35 ವರ್ಷದ ಮಹಿಳೆ, ಪಿ-90840ರ ಪ್ರಾಥಮಿಕ ಸಂಪರ್ಕದ ಹಾವೇರಿ ವಿದ್ಯಾನಗರದ 25 ವರ್ಷದ ಯುವಕ, ಪಿ-39537ರ ಪ್ರಾಥಮಿಕ ಸಂಪರ್ಕದ ಗುತ್ತಲ ನೀಲಗಿರಿಯ ಪೊಟ್ಟಣ್ಣನವರ ಓಣಿಯ 40 ವರ್ಷದ ಮಹಿಳೆ, ಹಾವೇರಿ ಬಸವೇಶ್ವರನಗರ ಸಿ ಬ್ಲಾಕ್‍ನ 51 ವರ್ಷದ ಕಾಲೇಜು ಅಧ್ಯಾಪಕ, ಪಿ-72777ರ ಸಂಪರ್ಕಿತ ಬಜಾಜ್ ಫೈನಾನ್ಸ್ ಕಂಪನಿಯ ಕೆಲಸಗಾರ ಚಿಕ್ಕಲಿಂಗದಹಳ್ಳಿಯ 23 ವರ್ಷದ ಯುವಕ, ಹಾವೇರಿ ಬಸವೇಶ್ವರನಗರ ಎ ಬ್ಲಾಕ್‍ನ ಐ.ಎಲ್.ಐ. ಲಕ್ಷಣದ 25 ವರ್ಷದ ಯುವಕ, ವಿದ್ಯಾನಗರದ 42 ವರ್ಷದ ಇಲೆಕ್ಟ್ರಿಕಲ್ ಕೆಲಸಗಾರ, ಬೆಂಗಳೂರು ಪ್ರವಾಸ ಹಿನ್ನೆಲೆಯ ಇಲೆಕ್ಟ್ರಿಕಲ್ ಕೆಲಸಗಾರ ತಾಜನಗರದ 42 ವರ್ಷದ ಪುರುಷ, ಪಿ-47925ರ ಸಂಪರ್ಕದ ಶಿವಾಜಿನಗರದ 4 ವರ್ಷದ ಹೆಣ್ಣು ಮಗು ಹಾಗೂ 26 ವರ್ಷದ ಮಹಿಳೆ, ಪಿ-47900ರ ಸಂಪರ್ಕದ ವಿದ್ಯಾನಗರದ 33 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ರಾಣೇಬೆನ್ನೂರು ತಾಲೂಕಿನ ಅಂತರವಳ್ಳಿ ಗ್ರಾಮದ ಐ.ಎಲ್.ಐ. ಲಕ್ಷಣದ 60 ವರ್ಷದ ಪುರುಷ, ಇಟಗಿ ಗ್ರಾಮದ 40 ವರ್ಷದ ಪುರುಷ, ಪಿ-68966ರ ಸಂಪರ್ಕದ ರಾಣೇಬೆನ್ನೂರು ಸಿದ್ದೇಶ್ವರ ನಗರದ 74 ವರ್ಷದ ಪುರುಷ, ಉಮಾಶಂಕರ ನಗರದ ಐ.ಎಲ್.ಐ. ಲಕ್ಷಣದ 28 ವರ್ಷದ ಮಹಿಳೆ, 65 ವರ್ಷದ ಪುರುಷ, 31 ವರ್ಷದ ಪುರುಷ, ಎಕೆಜೆ ಕಾಲೋನಿ 43 ವರ್ಷದ ಪುರುಷ(ಮರಣ),ಸಂಗಮ ವೃತ್ತದ ಐ.ಎಲ್.ಐ ಲಕ್ಷಣದ 42 ವರ್ಷದ ಮಹಿಳೆ, ಬೆಂಗಳೂರು ಪ್ರವಾಸ ಹಿನ್ನೆಲೆಯ ವಿಕಾಸ ನಗರದ 33 ವರ್ಷದ ಪುರುಷ, ಐ.ಎಲ್.ಐ. ಲಕ್ಷಣದ ಚೌಡೇಶ್ವರಿ ಬಡಾವಣೆಯ 48 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಶಿಗ್ಗಾಂವಿಯ ಗೌಳಿ ಓಣಿಯ ಐ.ಎಲ್.ಐ. ಲಕ್ಷಣದ 60 ವರ್ಷದ ಪುರುಷ, ಸರ್ಕಾರಿ ಆಸ್ಪತ್ರೆ ಲ್ಯಾಬ್ ಟೆಕ್ನಿಷಿಯನ್ 53 ವರ್ಷದ ಪುರುಷ, ಪಿ-31636ರ ಸಂಪರ್ಕದ ಬಂಕಾಪುರ ಶಾಬಜಾರನ 37 ವರ್ಷದ ಪುರುಷ, ಕತೀಬ ಪ್ಲಾಟನ್ ಖಾಸಗಿ ಆಸ್ಪತ್ರೆ ಬಿ.ಎಚ್.ಎಂ.ಎಸ್.ವೈದ್ಯರಾದ 48 ವರ್ಷದ ಮಹಿಳೆ ಹಾಗೂ ಬಿ.ಎ.ಎಂ.ಎಸ್.ವೈದ್ಯರಾದ 48 ವರ್ಷದ ಪುರುಷ, ಪಿ-94712ರ ಸಂಪರ್ಕಿತ ಡಿ ಗ್ರೂಪ್ ನೌಕರ 18 ವರ್ಷದ ಯುವಕ, ಪಿ-94712ರ ಸಂಪರ್ಕದ 18 ವರ್ಷದ ಯುವಕ, ಶಿಗ್ಗಾಂವ ಸದಾಶಿವ ಪೇಟೆಯ ಐ.ಎಲ್.ಐ. ಲಕ್ಷಣದ 65 ವರ್ಷದ ಪುರುಷ, ನಾರಾಯಣಪುರದ ಐ.ಎಲ್.ಐ. ಲಕ್ಷಣದ 45 ವರ್ಷದ ಪುರುಷ, ಶಿಗ್ಗಾಂವ ಮೆಹಬೂಬ ನಗರದ ಐ.ಎಲ್.ಐ ಲಕ್ಷಣದ 52 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಪಿ-96842ರ ಸಂಪರ್ಕದ ಸವಣೂರು ತಾಲೂಕು ಹಿರೇಮುಗದೂರ ಗ್ರಾಮದ 50 ವರ್ಷದ ಪುರುಷ, ಬೆಂಗಳೂರು ಪ್ರವಾಸ ಹಿನ್ನೆಲೆಯ ಕುಣಿಮೆಳ್ಳಿಹಳ್ಳಿ ಗ್ರಾಮದ 31 ವರ್ಷದ ಮಹಿಳೆ, ಹಾವಣಗಿ ಪ್ಲಾಟ್‍ನ ಐ.ಎಲ್.ಐ.ಲಕ್ಷಣದ 50 ವರ್ಷದ ಪುರುಷ, ಹುಬ್ಬಳ್ಳಿ ಪ್ರವಾಸ ಹಿನ್ನೆಲೆಯ ಸವಣೂರ ಹಾವಣಗಿ ಚಾಳನ 65 ವರ್ಷದ ಪುರುಷ, ಪಿ-96842ರ ಸಂಪರ್ಕದ ಹಿರೇಮುಗದೂರ ಗ್ರಾಮದ 60 ವರ್ಷದ ಪುರುಷ ಹಾಗೂ 50 ವರ್ಷದ ಮಹಿಳೆ, ಸವಣೂರು ಅಂಬೇಡ್ಕರ ನಗರದ ಖಾಸಗಿ ಆಸ್ಪತ್ರೆ ಸ್ಟಾಫ್ ನರ್ಸ್ 28 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಪಿ-76260ರ ಸಂಪರ್ಕದ ಹಾನಗಲ್ ತಾಲೂಕು ಅಕ್ಕಿಆಲೂರಿನ ಹಾಳೂರ ಓಣಿಯ 38 ವರ್ಷದ ಪುರುಷ, ಪಿ-68640ರ ಸಂಪರ್ಕದ ಕರಗುದರಿ ಗ್ರಾಮದ 32 ವರ್ಷದ ಪುರುಷ, ಹಾನಗಲ್‍ನ ರಾಜಧಾನಿ ಕಾಲೋನಿಯ ಐ.ಎಲ್.ಐ. ಲಕ್ಷಣದ 31 ವರ್ಷದ ಮಹಿಳೆ ಹಾಗೂ 37 ವರ್ಷದ ಪುರುಷ, ಪಿ-86458ರ ಸಂಪರ್ಕದ ಅಕ್ಕಿಆಲೂರ ಹಾಳೂರ ಓಣಿಯ 39 ವರ್ಷದ ಮಹಿಳೆ ಹಾಗೂ 40 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಬ್ಯಾಡಗಿ ಪಟ್ಟಣದ ತಳವಾರ ಓಣಿಯ ಐ.ಎಲ್.ಐ ಲಕ್ಷಣದ 45 ವರ್ಷದ ಮಹಿಳೆ, ಭಟ್ಕಳ ಮಂಗಳೂರು ಪ್ರವಾಸರ ಹಿನ್ನೆಲೆಯ ಬ್ಯಾಡಗಿ ಕ್ವಾರಂಟೈನ್‍ನಲ್ಲಿ ಇರಿಸಲಾಗಿದ್ದ ಚಿಕ್ಕಬಾಸೂರ ಗ್ರಾಮದ ಗೌಡರ ಓಣಿಯ 42 ವರ್ಷದ ಪುರುಷ ಹಾಗೂ 41 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಹಿರೇಕೆರೂರು ಸರ್ಕಲ್ ಇನ್ಸಪೆಕ್ಟರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿಕ್ಕೇರೂರು ಗ್ರಾಮದ 39 ವರ್ಷದ ಪೊಲೀಸನಿಗೆ ಕೋಂಕು ದೃಢಪಟ್ಟಿದೆ.
ಗುಣಮುಖರವಿವರ: ಹಾವೇರಿ ತಾಲೂಕಿನ ನಾಲ್ಕು ಹಾಗೂ ಶಿಗ್ಗಾಂವ ಹಾಗೂ ರಾಣೇಬೆನ್ನೂರ ತಾಲೂಕಿನ ತಲಾ ಓರ್ವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಮೃತರವಿವರ: ರಾಣೇಬೆನ್ನೂರು ನಗರದ ಏಕೆಜೆ ಕಾಲೋನಿ ಕೋರ್ಟ ಹಿಂಭಾಗದ(ಪಿ-99427) 43 ವರ್ಷದ ಪುರುಷ ತೀವ್ರ ಉಸಿರಾಟದ ತೊಂದರೆಯಿಂದ ಜುಲೈ 24 ರಂದು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆ ತಂದಾಗ ಜುಲೈ 25ರಂದು ಸದರಿಯವರ ಮೂಗಿನ ದ್ರವದ ಮಾದರಿಯನ್ನು ರ್ಯಾಪಿಡ್ ಆಕ್ಸಿಜನ್ ಕಿಟ್ ಮೂಲಕ ಪರೀಕ್ಷಿಸಲಾಗಿದ್ದು, ಕೋವಿಡ್-19 ಸೋಂಕು ದೃಢಪಟ್ಟಿರುತ್ತದೆ. ಸದರಿ ಸೋಂಕಿತರು ಅಂದೇ ಮರಣ ಹೊಂದಿದ್ದು, ಕೋವಿಡ್ ನಿಯಮಾವಳಿಯಂತೆ ಅಂತ್ಯಸಂಸ್ಕಾರ ಮಾಡಲಾಗಿದೆ, ಸೋಂಕಿತರ ನಿವಾಸದ ಪ್ರದೇಶವನ್ನು ನಿಯಮಾನುಸಾರ ಕಂಟೈನ್‍ಮೆಂಟ್ ಜೋನ್ ಹಾಗೂ ಬಫರ್ ಜೋನ್ ಆಗಿ ಘೋಷಿಸಲಾಗಿದೆ. ಆಯಾ ತಾಲೂಕಾ ದಂಡಾಧಿಕಾರಿಗಳನ್ನು ಇನ್ಸಿಡೆಂಟಲ್ ಕಮಾಂಡರ್ ಆಗಿ ನೇಮಿಸಲಾಗಿದೆ