ನಗರದಲ್ಲಿ ಭೀಮಾ ಕೋರೆಗಾಂವ್ ವಿಜಯದ ದಿನ‌ ಆಚರಣೆ

  • 14 Jan 2024 , 11:29 PM
  • Belagavi
  • 167

ಬೆಳಗಾವಿ: ವಿವಿಧ ದಲಿತ ಸಂಘಟನೆಗಳ ವತಿಯಿಂದ ಭೀಮಾ ಕೋರೆಗಾಂವ್ ವಿಜಯದ‌ ದಿನವನ್ನು ಶನಿವಾರ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಉದ್ಯಾನದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು ಕರೋನಾ ವಾರಿಯರ್ ಆಗಿ ಪೃಥ್ವಿ ಸಿಂಗ್ ಮತ್ತು ಸಾಮಾಜಿಕ ಕಾರ್ಯಕರ್ತ ದಲಿತ ನಾಯಕರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪ್ರೊ.ಕೆ.ಡಿ.ಮಂತ್ರೇಶಿ ಅವರು ಭೀಮಾ ಕೋರೆಗಾಂವ್ ಹಾಗೂ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಇತಿಹಾಸ ಕುರಿತು ವಿಚಾರ ಮಂಡಿಸಿದರು.

ಅರ್ಜುನ್ ದೇಮಟ್ಟಿ, ಮಲ್ಲೇಶ ಕುರಂಗಿ, ಬಸವರಾಜ ರಾಯಗೋಳ, ಸಿದ್ಧಪ್ಪ ಕಾಂಬಳೆ, ಅಶೋಕ ಮಣಿಕೇರಿ, ಎಂ.ಆರ್.ಕಲಪತ್ರಿ ಸೇರಿದಂತೆ ದಲಿತ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Read All News