ಹೊಸ ಶಿಕ್ಷಣ್ ನೀತಿಯಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆ :ಪ್ರಧಾನಿ ಮೋದಿ

  • 15 Jan 2024 , 3:43 AM
  • Delhi
  • 97

ನವಭಾರತದ ಮೂಲಾಧಾರವೂ ಯುವಜನತೆ, ಅದು ವಿಸ್ತರಣೆಯೂ ಹೌದು. ಯುವಕರು ನವ ಭಾರತದ ಆಡಳಿತಗಾರರೂ ಹೌದು, ನಾಯಕರೂ ಹೌದು. ಇಂದಿನ ನಮ್ಮ ಯುವಕರು ಪ್ರಾಚೀನತೆಯ ಪರಂಪರೆಯನ್ನು ಹೊಂದಿದ್ದಾರೆ, ಅವರಲ್ಲಿ ಆಧುನಿಕತೆಯ ಪ್ರಜ್ಞೆಯೂ ಇದೆ. ಆದ್ದರಿಂದ, ಯುವಕರು ಎಲ್ಲಿ ಮುನ್ನಡೇಯುತ್ತಾರೋ , ಭಾರತವು ಮುನ್ನಡೆಯುತ್ತದೆ ಮತ್ತು ಭಾರತ ಎಲ್ಲಿ ಓಡುತ್ತದೆಯೋ ಅಲ್ಲಿ ಜಗತ್ತು ಓಡಲಿದೆ ಎಂದು ಪ್ರಧಾನಿ ಹೇಳಿದ್ದಾರೆ.

ನಮ್ಮ ಯುವಕರು ಕ್ರೀಡೆಯಲ್ಲಿ ನಂಬಿಕೆಯನ್ನು ಹೊಂದುವುದು ಮತ್ತು ಕ್ರೀಡೆಯನ್ನು ತಮ್ಮ ವೃತ್ತಿಯನ್ನಾಗಿಸಲು ಪ್ರೋತ್ಸಾಹಿಸುವುದು ಅವಶ್ಯಕ. ಇದು ನನ್ನ ಸಂಕಲ್ಪ, ಮತ್ತು ನನ್ನ ಕನಸು ಕೂಡ! ನಮ್ಮ ಯುವಕರು ಕ್ರೀಡೆಯನ್ನು ಇತರ ವೃತ್ತಿಗಳ ರೀತಿಯಲ್ಲಿ ನೋಡಬೇಕೆಂದು ನಾನು ಬಯಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಜಾರಿಯಾಗುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹೆಚ್ಚಿನ ಕ್ರೀಡೆಗೆ ಆದ್ಯತೆ ನೀಡಲಾಗಿದೆ. ಕ್ರೀಡೆಗಳನ್ನು ಈಗ ವಿಜ್ಞಾನ, ವಾಣಿಜ್ಯ ಅಥವಾ ಇತರ ಅಧ್ಯಯನಗಳ ವರ್ಗದಲ್ಲಿ ಇರಿಸಲಾಗಿದೆ. ಮೊದಲು ಕ್ರೀಡೆಯನ್ನು ಹೆಚ್ಚುವರಿ ಚಟುವಟಿಕೆ ಎಂದು ಪರಿಗಣಿಸಲಾಗುತ್ತಿತ್ತು, ಆದರೆ ಈಗ ಶಾಲೆಯಲ್ಲಿ ಕ್ರೀಡೆಯೇ ಒಂದು ವಿಷಯವಾಗಿದೆ ಎಂದು ಭಾರತದ ಪ್ರಧಾನ ಮಂತ್ರಿ ಕಚೇರಿ ಟ್ವಿಟ್ ಮೂಲಕ ತಿಳಿಸಿದೆ.

Read All News