ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಬಸವ ಪಂಚಮಿ ನಿಮಿತ್ತ ಶರಣ ಸಂಸ್ಕೃತಿ ಬಸವ ಉತ್ಸವವನ್ನು ಪೂಜ್ಯ ಶ್ರೀ ಬಸವರಾಜ ಪಂಡಿತ ಗುರುಗಳ ನೇತೃತ್ವದಲ್ಲಿ ನಡೆಯಿತು. ಸಮುದಾಯದ ಸಹಭಾಗಿತ್ವದಲ್ಲಿ ನಡೆದ ಈ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಲು ವಿತರಣೆ ಮಾಡುವುದರ ಮೂಲಕ ವಿಶಿಷ್ಟವಾಗಿ ಆಚರಣೆ ಮಾಡಲಾಯಿತು.