ಸಂಡೇ ಕರ್ಫ್ಯೂ; ಅಂಗಡಿಗಳು ಬಂದ್, ವಾಹನ ಸಂಚಾರ ಅಬಾಧಿತ

  • 15 Jan 2024 , 1:06 AM
  • Haveri
  • 153

ಹಾವೇರಿ: ಜಿಲ್ಲೆಯಲ್ಲಿ ಕೊರೊನಾತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಜಾರಿಗೊಳಿಸಿದ ಭಾನುವಾರ ಕರ್ಫ್ಯೂಗೆ ಈ ಬಾರಿ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲೆಂದರಲ್ಲಿ ಬೈಕ್ ಹಾಗೂ ಕಾರುಗಳು ಸಂಚಾರಿಸುತ್ತಿದ್ದ ದೃಶ್ಯಗಳು ಸಾಮಾನ್ಯ ಇದ್ದು ಬೆಳಗ್ಗೆಯಿಂದಲೇ ಪ್ರಮುಖ ಮಾರುಕಟ್ಟೆ ಪ್ರದೇಶಗಳು ಸೇರಿದಂತೆ ನಗರದಎಲ್ಲಾ ಕಡೆಗಳಲ್ಲಿ ಅಂಗಡಿ ಮುಂಗಟ್ಟುಗಳಿಗೆ ಬಾಗಿಲು ಹಾಕಲಾಗಿದೆ. ಬಸ್ಸುಗಳ ಸಂಚಾರ ಸ್ಥಗಿತಗೊಳಿಸಿದ್ದರಿಂದ ಬಸ್‍ನಿಲ್ದಾಣ ಬಿಕೋ ಎನ್ನುತ್ತಿತ್ತು. ಕಳೆದ ವಾರದಂತೆ ಈ ಬಾರಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಕಾರಣ ನಗರದ ಎಲ್ಲ ಕಡೆಗಳಲ್ಲಿಯೂ ಬೈಕ್, ಕಾರು, ಆಟೋಗಳು ಸಂಚಾರ ಎಂದಿನಂತೆ ಸಾಮಾನ್ಯವಾಗಿತ್ತು. ಕರ್ಫ್ಯೂ ಸಮಯವನ್ನು ಸದ್ಬಳಕೆ ಮಾಡುವಚಿಂತನೆಯಿಂದ ನಗರಸಭೆ ವತಿಯಿಂದ ನಗರದ ಮೆಡ್ಲೇರಿರಸ್ತೆಯನ್ನು ಸ್ವಚ್ಛಗೊಳಿಸಿ ಕ್ರಿಮಿನಾಶಕ ಸಿಂಪಡಿಸಲಾಯಿತು.

Read All News