ಬ್ಯಾಂಕ ಆವರಣದವರಿಗೆ ವಕ್ಕರಿಸಿದ ಕೋರೊನಾ, ಸೀಲ್‍ಡೌನ್ ಆದ ಬ್ಯಾಂಕ್

  • 23 Dec 2023 , 11:51 AM
  • Haveri
  • 106

ಹಾವೇರಿ: ಜಿಲ್ಲೆಯ ರಾಣೇಬೆನ್ನೂರ ಪಟ್ಟಣದಲ್ಲಿ ಬ್ಯಾಂಕ್‍ ಆವರಣದ ಕುಟುಂಬದ ಸದಸ್ಯರೊಬ್ಬರಿಗೆ ಕೊರೊನಾ ಪಾಸಿಟಿವ್ ಆಗಿರುವುದರಿಂದ ನಗರದ ಸಂಗಮ್ ಸರ್ಕಲ್ ಬಳಿಯ ಬ್ಯಾಂಕ್‍ಆಫ್ ಬರೋಡಾ ಸೀಲ್‍ಡೌನ್ ಮಾಡಲಾಗಿದೆ. ರವಿವಾರ ದೃಢವಾದ 10 ಪ್ರಕರಣಗಳಲ್ಲಿ ಸಂಗಮ ಸರ್ಕಲ್ ನಿವಾಸಿಯೊಬ್ಬರಿಗೆ ಪಾಸಿಟವ್ ಬಂದ ಕಾರಣ ಮನೆ ಸೇರಿದಂತೆ ಬ್ಯಾಂಕ್ ಸೀಲ್‍ಡೌನ ಮಾಡಲಾಗಿದ್ದು, ಬ್ಯಾಂಕಿನ ಎಲ್ಲಾ ಸಿಬ್ಬಂದಿಗೆ ರಜೆ ಘೋಷಿಸಲಾಗಿದೆ. ಆದ್ದರಿಂದ ಸರಕಾರದ ಆದೇಶದಂತೆ ಇಂದು ಸೋಮವಾರದಿಂದ ಮುಂದಿನ ಮೂರು ದಿನಗಳ ಕಾಲ ಬ್ಯಾಂಕನ ಯಾವುದೇ ವ್ಯವಹಾರಗಳು ನಡೆಯುವುದಿಲ್ಲ, ಪರಿಸ್ಥಿತಿ ನೋಡಿಕೊಂಡು ಸರಕಾರದ ಮುಂದಿನ ಆದೇಶದ ನಂತರ ಬ್ಯಾಂಕ್‍ನಲ್ಲಿ ವ್ಯವಹಾರ ಪ್ರಾರಂಭಿಸಲಾಗುವುದು ಎಂದು ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ.

Read All News