60 ಅಡಿಯ ತೆರೆದ ಬಾವಿಯಲ್ಲಿ ಬಿದ್ದ ಆಕಳು, ಅಗ್ನಿಶಾಮಕದಳದಿಂದ ರಕ್ಷಣೆ

  • 15 Jan 2024 , 5:50 AM
  • Belagavi
  • 121

ಅಥಣಿ : ತಾಲೂಕಿನ ಬಳ್ಳಿಗೇರಿ ಗ್ರಾಮದ ಸಂಜು ಅಪ್ಪಾಸಾಬ ಸಾಳುಂಕೆ ಎಂಬುವವರ ಆಕಳು ಮೇಯಲು ಹೋಗಿ ಬಾವಿಯಲ್ಲಿ ಕಾಲು ಜಾರಿ ತೆರೆದ ಬಾವಿಯಲ್ಲಿ ಬಿದ್ದಿರುವ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ.

ಆಕಳು ಬಿದ್ದ ತಕ್ಷಣ ಊರಿನ ಗ್ರಾಮಸ್ಥರು ಅಥಣಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿಸಿದ ತಕ್ಷಣ ಸ್ಥಳಕ್ಕೆ ಜಲವಾಹನ ಹಾಗೂ ಸಿಬ್ಬಂದಿಯವರೊಂದಿಗೆ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ತೆರೆದ ನೀರಿಲ್ಲದ ಬಾವಿಯಲ್ಲಿ ಅಂದಾಜು 55 ರಿಂದ 60 ಅಡಿ ಆಳದಲ್ಲಿ ಆಕಳು ಕಾಲು ಜಾರಿ ಬಿದ್ದಿರುವುದನ್ನು ನೋಡಿ ಸುಮಾರು 1 ಗಂಟೆ 55 ನಿಮಿಷಗಳ ಕಾಲ ಕಾರ್ಯಚರಣೆ ಮಾಡಿ ಆಕಳನ್ನು ಜೀವಂತವಾಗಿ ರಕ್ಷಣೆ ಮಾಡಲಾಗಿದೆ.

ಈ ರಕ್ಷಣಾ ಕಾರ್ಯಚರಣೆಯಲ್ಲಿ ಮಹಾಂತಪ್ಪ ಬಿರಾದರ, ಪ್ರಶಾಂತ್ ಚವಾಣ, ಆಸಿಫ್ ಅಹಮದ್ ಸನದಿ, ಪ್ರಕಾಶ್ ಆಲಿಶೆಟ್ಟಿ, ಸಂಜೀವ್ ಚೌಗಲಾ, ಸಂತೋಷ್ ಚೌಗಲಾ ಸೇರಿದಂತೆ ಊರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

Read All News