ಕರ್ಫ್ಯೂ ವೇಳೆ ಟಗರು ಕಾಳಗ ಆಡಿಸುತ್ತಿದ್ದವರ ಬಂಧನ, ಪ್ರತಿಭಟನೆ
- 14 Jan 2024 , 9:31 PM
- Haveri
- 107
<strong>ಹಾವೇರಿ</strong>: ಜಿಲ್ಲೆಯ ರಾಣೇಬೆನ್ನೂರ ಪಟ್ಟಣದಲ್ಲಿ ಭಾನುವಾರ ಕರ್ಫ್ಯೂ ಸಮಯದಲ್ಲಿ ಟಗರು ಕಾಳಗ ಆಡಿಸುತ್ತಿದ್ದವರ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಹಾಗೂ ನಗರಸಭೆ ಸದಸ್ಯನ ನಡುವೆ ವಾಗ್ವಾದ ಹಾಗೂ ಪ್ರತಿಭಟನೆ ನಡೆದ ಘಟನೆ ಭಾನುವಾರ ನಗರದ ಗ್ರಾಮೀಣ ಪೊಲೀಸ್ ಠಾಣೆ ಬಳಿ ನಡೆದಿದೆ. ಘಟನೆ ಹಿನ್ನೆಲೆ: ತಾಲೂಕಿನ ಹುಣಸಿಕಟ್ಟಿ ಗ್ರಾಮದ ಬಳಿ ಕೆಲವರು ಟಗರು ಕಾಳಗ ನಡೆಸುತ್ತಿದ್ದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಕಾಳಗಕ್ಕೆ ಬಳಸಿದ್ದ ಎರಡು ಟಗರು ಹಾಗೂ ಎಂಟು ಜನರನ್ನು ಬಂಧಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ನಗರಸಭಾ ಸದಸ್ಯರೊಬ್ಬರು ನಗರದಲ್ಲಿನ ಗ್ರಾಮೀಣ ಪೊಲೀಸ್ ಠಾಣೆಗೆ ತೆರಳಿ ಪಿಎಸ್‍ಐ ಜತೆ ವಿಚಾರಣೆ ನಡೆಸಿದ್ದಾರೆ. ಆಗ ನಗರಸಭೆ ಸದಸ್ಯನ ಬೆಂಬಲಿಗರು ಹಾಗೂ ಅಧಿಕಾರಿಯ ಜತೆ ಮಾತಿನ ಚಕಮಕಿ ನಡೆದಿದೆ. ಇದರಿಂದ ರೊಚ್ಚಿಗೆದ್ದ ನಗರಸಭೆ ಸದಸ್ಯನ ಬೆಂಬಲಿಗರು ರಸ್ತೆಗೆ ತೆರಳಿ ಪ್ರತಿಭಟನೆ ನಡೆಸಿದರು. ಟಗರಿನ ಕಾಳಗಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.