ಬೆಳಗಾವಿ : ಜಿಲ್ಲೆ ಕಿತ್ತೂರು ತಾಲೂಕಿನ ಬಚ್ಚನಕೇರಿ ಕ್ರಾಸ್ ಹತ್ತಿರ ಬೈಲಹೊಂಗಲ ತಾಲೂಕಿನ ಮರಿಕಟ್ಟಿ ಗ್ರಾಮದ ರಮೇಶ ನಾಗಪ್ಪ ಮಾದಿಗರ (36) ಮೃತ ದೇಹ ಪತ್ತೆಯಾಗಿದೆ ಇದು ಕಿತ್ತೂರು ಪೋಲಿಸ ಠಾಣೆಯ ವ್ಯಾಪ್ತಿಯಲ್ಲಿ ಆಗಿರುವ ಘಟನೆ ಆಗಿದೆ.
ರಮೇಶ ನಾಗಪ್ಪ ಮಾದಿಗರ ಮೃತ ದುರ್ದೈವಿ ಗೌಂಡಿ ಕೆಲಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ ಆದರೆ ಈತ ಬುಧವಾರದಂದು ಕಿತ್ತೂರಲ್ಲಿ ಕೆಲಸ ಇದೆ ಎಂದು ಹೇಳಿ ತೆರಳಿದ್ದನು ಆದರೆ ವಾಪಸ್ ಬರುವ ಅಂತಹ ಸಂದರ್ಭದಲ್ಲಿ ಗುರುವಾರ ಸಂಜೆ ಕೊಲೆಯಾದ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ.
ಯಾರೋ ದುಷ್ಕರ್ಮಿಗಳು ರಮೇಶನನ್ನ ಕೊಲೆ ಮಾಡಿ ಶವ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ.ನಂತರ ಮೃತ ದೇಹವನ್ನ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು.
ಘಟನಾ ಸ್ಥಳಕ್ಕೆ ಹೆಚ್ಷವರಿ ಪೋಲಿಸ್ ವರಿಷ್ಠಾಧಿಕಾರಿ ಮಹಾಲಿಂಗ ನಂದಗಾಂವಿ ಭೇಟಿ ನೀಡಿದ್ದು.ಹೆಚ್ಚಿನ ತನಿಖೆಯನ್ನ ಮುಂದುವರೆಸಲಾಗುವುದು ಎಂದು ತಿಳಿಸಿದರು.