ವ್ಯಾಕ್ಸಿನೇಷನ್‌ ನಲ್ಲಿ ದಾಖಲೆ‌ ಬರೆದ‌ ಭಾರತ: ಎಮ್.ಬಿ.ಝೀರಲಿ

  • 14 Jan 2024 , 4:16 PM
  • Belagavi
  • 351

ಬೆಳಗಾವಿ: ಕೊರೊನಾ ಸೋಂಕಿನ ಭೀತಿಗೆ 135 ಕೋಟಿ ಜನ ಸಿಲುಕುವ ಅಪಾಯವಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಅಸಾಧ್ಯ ಎಂದುಕೊಂಡ ಕೆಲಸ ಸಾಧ್ಯವಾಗಿ ಕೋವಿಡ್ ಲಸಿಕೆಗೆ ಭಾರತಕ್ಕೆ ಸಂಜೀವಿನಿಯಾಗಿ ಮಾರ್ಪಪಟ್ಟಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಮ್.ಬಿ.ಝೀರಲಿ ಹೇಳಿದರು.

ಅವರು ಸೋಮವಾರ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದೇಶದಲ್ಲಿ ಕೊರೊನಾ ವ್ಯಾಕ್ಸಿನೇಷನ್‌ ಅಭಿಯಾನಕ್ಕೆ ಒಂದು‌ ವರ್ಷ ಪೂರ್ಣಗೊಂಡಿದೆ. ಇಲ್ಲಿಯವರೆಗೆ 157ಕೋಟಿಗೂ ಅಧಿಕ ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. ಸುಮಾರು 66 ಕೋಟಿ ಜನರು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಮೊದಲ ಡೋಸ್ 91 ಕೋಟಿ ಜನರಿಗೆ ನೀಡಲಾಗಿದೆ. ಕೊರೊನಾ ಲಸಿಕೆ ಅಭಿಯಾನ ಕಳೆದ ವರ್ಷ ಪ್ರಾರಂಭಿಸಲಾಗಿತ್ತು. ಅಂದಿನಿಂದ ಇಲ್ಲಿಯವರೆಗೆ ಸರಾಸರಿ 43 ಲಕ್ಷ ಡೋಸ್ ಗಳನ್ನು ನಿತ್ಯ ನಿರ್ವಹಿಸಲಾಗುತ್ತಿದೆ ಎಂದರು.

76 ಕೋಟಿ ಹೆಚ್ಚು ಮಹಿಳೆಯರಿಗೆ ಲಸಿಕೆ ಹಾಕಲಾಗಿದೆ. ಕೋವಿಡ್ ಲಸಿಕಾ ಕೇಂದ್ರಗಳು ಗ್ರಾಮೀಣ ಪ್ರದೇಶಗಳಲ್ಲಿ 99 ಕೋಟಿ ಡೋಸ್ ನೀಡಿವೆ. ಅಲ್ಲದೆ, 3.36 ಲಕ್ಷ ತೃತೀಯ ಲಿಂಗಿಗಳಿಗೆ ಲಸಿಕೆ ನೀಡಲಾಗಿದೆ. ಇದರೊಂದಿಗೆ, ಮಂಚೂಣಿಯ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟ ವೈದ್ಯರು ಬೂಸ್ಟರ್ ಡೋಸ್ ಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು.

Read All News