ಹುಕ್ಕೇರಿ: ತಂದೆ ತನ್ನ ಮಕ್ಕಳಿಗೆ ವಿಷ ಉಣಿಸಿ ತಾನೂ ಕೂಡಾ ವಿಷ ತೆಗುದುಕೊಂಡು ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ಹುಕ್ಕೇರಿ ತಾಲೂಕಿನ ಯಾದಗೂಡ ಗ್ರಾಮದಲ್ಲಿ ಇಂದು ನಡೆದಿದೆ, ಆತ್ಮಹತ್ಯೆಗೆ ಪ್ರಮುಖ ಕಾರಣ ತನ್ನ ಪತ್ನಿ ತವರಿಗೆ ಹೋಗಿದ್ದರಿಂದ ಮನನೊಂದು ಆತ್ಮಹತ್ಯೆ ಶರಣಾಗಿದ್ದನೆ.
ತಮ್ಮಣ್ಣಾ ಗಿಡ್ಡಾಳ (35), ನಿರಂಜನ (10),ಚಿನ್ನು (2) ಮೃತಪಟ್ಟ ದುರ್ದೈವಿಗಳು.
ಪತಿ ಪತ್ನಿಯ ನಡುವೆ ಜಗಳವಾದ ಕಾರಣ ಪತ್ನಿ ತವರಿಗೆ ಹೋಗಿದ್ದಾಳೆ . ಪತ್ನಿಯನ್ನು ಕರೆದುಕೊಂಡು ಬರಲು ಪತಿ ಹೆಂಡತಿಯ ತವರು ಮನೆ ಹುಕ್ಕೇರಿ ತಾಲೂಕಿನ ಕೇಸ್ತಿ ಗ್ರಾಮಕ್ಕೆ ಹೋಗಿದ್ದಾಗ, ಪತ್ನಿಯ ಮನೆಯವರು ತಮ್ಮಣ್ಣನನ್ನ ಜೋತೆ ಮತ್ತೆ ಜಗಳ ಮಾಡಿದ್ದಾರೆ .
ಈ ಹಿನ್ನೆಲೆಯಲ್ಲಿ ಮನನೊಂದು ರಾತ್ರಿ ಮಕ್ಕಳಿಗೆ ವಿಷ ಉಣಿಸಿ ತಾನುಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ .