ಪಾಲಿಕೆ ಚುನಾವಣೆ ವೈಷ್ಯಮ: ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ

  • 14 Jan 2024 , 10:48 PM
  • Belagavi
  • 125

ಬೆಳಗಾವಿ : ಮಹಾನಗರ ಪಾಲಿಕೆ ಚುನಾವಣೆ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನ ಹತ್ಯೆಗೆ ಯತ್ನ ಮಾಡಿರುವ ಘಟನೆ ಮಂಗಳವಾರ ನಡೆದಿದೆ.

ಕುಡಗೋಲಿನಿಂದ ಹಲ್ಲೆ ಮಾಡಿ ಯುವಕನ ಕೊಲೆಗೆ ಯತ್ನ ಮಾಡಿದ್ದು, ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದಲ್ಲಿ ನಿನ್ನೆ ನಡೆದ ಘಟನೆ ನಡೆದಿದ್ದು, ಶ್ರೀಕಾಂತ ಕಟಾಬಳಿ ಮೇಲೆ ಕುಡಗೋಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಶ್ರೀಕಾಂತ ಕಟಾಬಳಿ ತಲೆಗೆ ಗಂಭೀರ ಗಾಯ, ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರಡ. ಲಕ್ಷ್ಮಣ್ ದಡ್ಡಿ, ಲಕ್ಷ್ಮಣ್ ಪುತ್ರ ಸಚಿನ್, ರಂಜಿತ್‌ನಿಂದ ಹಲ್ಲೆ ಆರೋಪ ಹಲ್ಲೆಗೆ ಒಳಗಾದ ವ್ಯಕ್ತಿಯ ಕುಟುಂಬಸ್ಥರು ಮಾಡುತ್ತಿದ್ದಾರೆ‌‌ ಜಮೀನಿಗೆ ಆಕಳು ಮೇಯಿಸಲು ಬಿಟ್ಟಿದ್ದಿಯಾ ಎಂದು ಆರೋಪಿಸಿ ಹಲ್ಲೆ ಆರೋಪ ಮಾಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ದಡ್ಡಿ ಕುಟುಂಬದಿಂದ ದಾದಾಗಿರಿ ಮಾಡುತ್ತಿದ್ದಾರಂತೆ. ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ದಡ್ಡಿ ಕುಟುಂಬದ ವಿರುದ್ಧ ಗಾಯಾಳು ಶ್ರೀಕಾಂತ ಅತ್ತಿಗೆ ಸ್ಪರ್ಧೆ ಹಿನ್ನೆಲೆ.

ಇದೇ ವೈಷಮ್ಯ ಇಟ್ಟುಕೊಂಡು ಹಲ್ಲೆ ಮಾಡಿದ್ದಾರೆಂದು ಕಟಾಬಳಿ ಕುಟುಂಬಸ್ಥರ ಆರೋಪ. ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗಾಯಾಳು ಶ್ರೀಕಾಂತ ಕುಟುಂಬಸ್ಥರ ಆರೋಪ. ಲಕ್ಷ್ಮಣ್ ದಡ್ಡಿ ಹಾಗೂ ಮಕ್ಕಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಮಾಡಿದ್ದಾರೆ.

Read All News