ಹಿರೇಕೆರೂರ್: ತಾಲೂಕಿನ ಬುರಡಿಕಟ್ಟಿ ಗ್ರಾಮದಲ್ಲಿ ಎಚ್.ಪಿ.ಎಸ್. ಶಾಲೆಯ ಕೊಠಡಿ, ಚಿಕ್ಕೊಣತಿ ಗ್ರಾಮದಲ್ಲಿ ಎಚ್.ಪಿ.ಯು.ಎಸ್ ಶಾಲೆಯ ಕೊಠಡಿ ಹಾಗೂ ಅಂಬೇಡ್ಕರ್ ಭವನ, ಹಿರೇಕ್ಕೊಣತಿ ಗ್ರಾಮದಲ್ಲಿ ಅಂಬೇಡ್ಕರ್ ಭವನ, ನಿಟ್ಟೂರು ಗ್ರಾಮದಲ್ಲಿ ಎಲ್.ಪಿ.ಯು.ಎಸ್. ಶಾಲೆಯ ಕೊಠಡಿ, ಲಿಂಗಾಪುರ ಗ್ರಾಮದಲ್ಲಿ ಎಚ್.ಪಿ.ಎಸ್. ಶಾಲೆಯ ಕೊಠಡಿ, ಚಿನ್ನಮುಳಗುಂದ ಗ್ರಾಮದಲ್ಲಿ, ಹೆಚ್.ಪಿ.ಎಸ್ ಶಾಲಾ ಕೊಠಡಿ, ಯೋಗಿಕೊಪ್ಪ ಗ್ರಾಮದ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ, ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರರಾದ ಆರ್.ಹೆಚ್ ಭಗವಾನ್, ಡಿ.ಸಿ ಪಾಟೀಲ್, ಆರ್.ಎಂ ಗಂಗೋಳ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ರಾಜು ಬಣಕಾರ್, ಷಣ್ಮುಖಯ್ಯ ಮಳಿಮಠ ಹಾಗೂ ಮುಖಂಡರು, ಊರಿನ ಹಿರಿಯರು ಉಪಸ್ಥಿತರಿದ್ದರು.