ರಾಜಕೀಯ ಬಿಡ್ತೇನಿ‌ ಆದ್ರೆ ಬಿಜೆಪಿ ಬಿಡೋಲ್ಲ: ಶಾಸಕ‌‌ ದುರ್ಯೋಧನ.

  • 14 Jan 2024 , 10:54 PM
  • Belagavi
  • 98

ಬೆಳಗಾವಿ: ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ ನಾನು. ಬೇಕಾದ್ರೆ ರಾಜಕೀಯ ಬಿಡ್ತನಿ, ಆದ್ರೆ ಬಿಜೆಪಿ ಬಿಡಲ್ಲ ಎಂದು ರಾಯಭಾಗ ಶಾಸಕ ದುರ್ಯೋಧನ ಐಹೊಳೆ ಹೇಳಿಕೆ.

ನ್ಯೂ ಸರ್ಕಿಟ್ ಹೌಸ್ ನಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದ ಚಿಹ್ನೆ ಮೇಲೆ ನಾನು ಮೂರು ಬಾರಿ ಆಯ್ಕೆ ಆಗಿದ್ದೇನೆ ಅದು ನನ್ನ ತಾಯಿ ಸಮಾನ. ಆದಿ ಜಾಂಬವ ನಿಗಮಕ್ಕೆ 500ಕೋಟಿ ಹಣ ಕೊಡಿ ಎಂದು ಬೇಡಿಕೆ ಇದೆ ಎಂದರು.

ಬೆಳಗಾವಿಯಲ್ಲಿ ಬಿಜೆಪಿ ನಾಯಕರ ಗೌಪ್ಯ ಸಭೆ ವಿಚಾರ. ಕವಟಗಿಮಠ ಸಭೆಗೆ ಫೋನ್ ಮಾಡಿದ್ರು, ಆದ್ರೆ ನನ್ನ ಹುಟ್ಟುಹಬ್ಬ ಇದ್ದ ಕಾರಣ ಸಭೆಗೆ ಹೋಗಿಲ್ಲ. ಬೆಳಗಾವಿ ಬಿಜೆಪಿ ಎರೆಡು ಬಣಗಳ ವಿಚಾರಕ್ಕೆ ಉತ್ತರಿಸಿದ ಅವರು, ಅವರಿಗೆ ಬುದ್ಧಿ ಹೇಳುವಷ್ಟು ದೊಡ್ಡವನಲ್ಲ, ನಮ್ಮ ಹೈ ಕಮಾಂಡ್ ಅವರ ಗಮನಕ್ಕೆ ತರುತ್ತೇವೆ ಎಂದರು.

ಎರೆಡು ಇರುವ ಗುಂಪು ಒಂದು ಮಾಡಿಸಿ ತಾಲೂಕ್, ಜಿಲ್ಲಾ ಪಂ. ಚುನಾವಣೆಯಲ್ಲಿ ಬಿಜೆಪಿ ಭಾವುಟ ಹಾರೈಸುತ್ತೇವೆ. ಸಚಿವ ಸ್ಥಾನ ಯಾರಿಗೂ ಕೊಡತಾರ ಕೊಡಲಿ.

ನಾನು ಸಚಿವ ಸ್ಥಾನಕ್ಕೆ ಅಪೇಕ್ಷೆ ಮಾಡಿಲ್ಲ, ಅವರಾಗಿಯೇ ಕೊಟ್ರೆ ನಿಭಾಯಿಸುತ್ತೇನೆ ಎಂದರು.

Read All News