ಜನಕಲ್ಯಾಣಕ್ಕಾಗಿ ನಿರಂತರ ಯೋಜನೆಗಳು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

  • 14 Jan 2024 , 11:18 PM
  • Bengaluru
  • 157

ಬೆಂಗಳೂರು : ನಮ್ಮದು ಸ್ಪಂದನಾಶೀಲವಾಗಿರುವ ಸರ್ಕಾರ. ಸಮಸ್ಯೆಗಳು ಎದುರಾದಂತೆ ಸೂಕ್ತವಾಗಿ ಸ್ಪಂದಿಸುತ್ತಾ ಬಂದಿದ್ದೇವೆ. ನಿರಂತರವಾಗಿ ಜನರಿಗೆ ಸಹಾಯ ಮಾಡುವ ಜನಕಲ್ಯಾಣ ಯೋಜನೆಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಸ್ಪಂದನಾಶೀಲಸರ್ಕಾರ 

ನಮ್ಮದು ಸ್ಪಂದನಾಶೀಲ ಸರ್ಕಾರ. ಅದಕ್ಕೆ 100 ದಿನ, 6 ತಿಂಗಳು ಅಥವಾ ಯಾವುದೇ ಸಂದರ್ಭದ ಅಗತ್ಯವಿಲ್ಲ. ಜೋಳ ಖರೀದಿಗೆ ಅವಕಾಶ ಮಾಡಿಕೊಡಬೇಕೆಂಬ ಬೇಡಿಕೆ ಬಂದಿತ್ತು, ಅದಕ್ಕೆ ಅನುವು ಮಾಡಿಕೊಡಲಾಗಿದೆ. ಅಂತೆಯೇ ರಾಗಿ ಖರೀದಿಯನ್ನೂ ಮುಂದುವರೆಸಬೇಕು ಎಂಬ ಬೇಡಿಕೆ ಇದೆ.

ಅದನ್ನು ಕೂಡ ಸಚಿವ ಸಂಪುಟದ ಉಪಸಮಿತಿಯ ಮುಂದಿಟ್ಟು ರೈತರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುವುದು. ಹೀಗೆ ಸಮಸ್ಯೆಗಳಿಗೆ ಎದುರಾದಂತೆ ಅವುಗಳಿಗೆ ಕೂಡಲೇ ಸ್ಪಂದಿಸಲಾಗುತ್ತಿದೆ. ಅದಕ್ಕೆ ಯಾವುದೇ ಸಂದರ್ಭ ಒದಗಿಬರಬೇಕಿಲ್ಲ ಎಂದರು.

ಹುಟ್ಟುಹಬ್ಬಆಚರಿಸುವುದಿಲ್ಲ:

ಜನವರಿ 28 ರಂದು ಮುಖ್ಯಮಂತ್ರಿಗಳ ಮುಖ್ಯಮಂತ್ರಿಗಳ ಹುಟ್ಟುಹಬ್ಬ ಯಾವ ರೀತಿ ಆಚರಿಸಲಾಗುವುದು ಎನ್ನುವ ಮಾಧ್ಯಮದವರ ಪ್ರಶ್ನೆಗೆ ‘ಹುಟ್ಟುಹಬ್ಬವನ್ನು ಎಂದೂ ಆಚರಿಸಿಕೊಂಡಿಲ್ಲ. ಹಾಗಾಗಿ ನಾಳೆಯೂ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ’ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸರ್ಕಾರದಕೆಲಸಗಳಪಕ್ಷಿನೋಟಒದಗಿಸುವಪುಸ್ತಕ:

ಸರ್ಕಾರಕ್ಕೆ 6 ತಿಂಗಳು ತುಂಬುತ್ತಿರುವ ಸಂದರ್ಭದಲ್ಲಿ ಈ ಅವಧಿಯಲ್ಲಿ ಆಗಿರುವ ಕೆಲಸಗಳ ಬಗ್ಗೆ ಮತ್ತು ಅವು ಯಾವ ರೀತಿ ಜನೋಪಯೋಗಿ ಆಗಿವೆ ಎಂಬುದರ ಪಕ್ಷಿನೋಟವನ್ನು ಪುಸ್ತಕ ಬಿಡುಗಡೆಯಾಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕೋವಿಡ್ನಿರ್ವಹಣೆ:

ಸಚಿವ ಸಂಪುಟ ಸಭೆ ಅಜೆಂಡಾ ಪ್ರಕಾರ ನಡೆಯಲಿದ್ದು, ಇತರೆ ವಿಷಯಗಳಲ್ಲಿ ಹಲವಾರು ವಿಷಯಗಳನ್ನು ಚರ್ಚೆ ಮಾಡಲಿದ್ದು, ಕೋವಿಡ್ ನಿರ್ವಹಣೆ ಯಾವರೀತಿಯಾಗಬೇಕೆದು ತಜ್ಞರ ಸಮಿತಿಗೆ ವರದಿ ನೀಡಲು ಸೂಚಿಸಲಾಗಿದೆ. ವರದಿಬಂದ ಕೂಡಲೇ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು ಎಂದರು.

Read All News